ಸಿಎನ್‌ಎನ್ ವರದಿಗಾರನ ಶ್ವೇತಭವನ ಪ್ರವೇಶ ನಿಷೇಧ ರದ್ದು

Update: 2018-11-17 15:17 GMT

ವಾಶಿಂಗ್ಟನ್, ನ. 17: ಸಿಎನ್‌ಎನ್ ವರದಿಗಾರ ಜಿಮ್ ಅಕೋಸ್ಟ ಅವರಿಗೆ ಶ್ವೇತಭವನಕ್ಕೆ ಪ್ರವೇಶ ಕಲ್ಪಿಸುವ ಪತ್ರಿಕಾ ಬ್ಯಾಜನ್ನು ಹಿಂದಿರುಗಿಸುವಂತೆ ಅಮೆರಿಕದ ಫೆಡರಲ್ ನ್ಯಾಯಾಧೀಶರೊಬ್ಬರು ಶುಕ್ರವಾರ ಶ್ವೇತಭವನಕ್ಕೆ ಆದೇಶ ನೀಡಿದ್ದಾರೆ.

ಶ್ವೇತಭವನದಲ್ಲಿ ವಾರದ ಹಿಂದೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸಿಎನ್‌ಎನ್ ವರದಿಗಾರ ಪ್ರಶ್ನೆಯೊಂದನ್ನು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಟ್ರಂಪ್ ಅವರಿಂದ ಮೈಕನ್ನು ತೆಗೆದುಕೊಳ್ಳುವಂತೆ ತನ್ನ ಸಹಾಯಕಿಗೆ ಸೂಚಿಸಿದ್ದರು.

ಈ ಘಟನೆಯ ಹಿನ್ನೆಲೆಯಲ್ಲಿ ಶ್ವೇತಭವನಕ್ಕೆ ಅವರ ಪ್ರವೇಶವನ್ನು ಟ್ರಂಪ್ ನಿಷೇಧಿಸಿದ್ದರು.

ಈ ಪ್ರಕರಣವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಳ್ವಿಕೆಯಲ್ಲಿ ಪತ್ರಿಕಾ ಸ್ವಾತಂತ್ರದ ಪರೀಕ್ಷೆ ಎಂಬುದಾಗಿ ಪರಿಗಣಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News