ಮುಸಲೋನಿ ಅಧಿಕಾರಕ್ಕೆ

Update: 2018-11-17 18:35 GMT

1497: ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮಾ, ಗುಡ್‌ಹೋಪ್ ಭೂಶಿರವನ್ನು ತಲುಪಿದನು.

1738: ಫ್ರಾನ್ಸ್ ಮತ್ತು ಆಸ್ಟ್ರಿಯಾ ಪರಸ್ಪರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವು.

1922: ಇಟಲಿಯ ಸರ್ವಾಧಿಕಾರಿಯಾಗಿ ಫ್ಯಾಶಿಸಂನ ಕಟ್ಟಾ ಬೆಂಬಲಿಗ ಮುಸಲೋನಿ ಇಂದು ಅಧಿಕಾರ ವಹಿಸಿಕೊಂಡನು. ಈ ಸಂದರ್ಭದಲ್ಲಿ ಇಟಲಿಯ ಸಂಸತ್ತು ಆತನಿಗೆ ಪೂರ್ಣ ಬೆಂಬಲ ನೀಡಿತ್ತು.

1950: ದಕ್ಷಿಣ ಕೊರಿಯಾ ಅಧ್ಯಕ್ಷ ಸಿಂಗ್ಮನ್ ರ್ಹಿ ಸಾಮೂಹಿಕ ಹತ್ಯೆಯನ್ನು ಅಂತ್ಯಗೊಳಿಸುವ ಕಾನೂನು ಜಾರಿಗೊಳಿಸಿದರು.

1967: ಕಾಲುಬಾಯಿ ರೋಗದ ಕಾರಣದಿಂದಾಗಿ ಬ್ರಿಟನ್‌ನಲ್ಲಿ 80,000ಕ್ಕಿಂತ ಅಧಿಕ ದನ, ಹಂದಿ ಹಾಗೂ ಕುರಿಗಳನ್ನು ಹತ್ಯೆಗೈಯಲಾಯಿತು. ಅಲ್ಲದೆ ಫಾರ್ಮ್‌ನಲ್ಲಿನ ಪ್ರಾಣಿಗಳ ಮಾಂಸದಂಧೆಗೆ ನಿಷೇಧ ಹೇರಲಾಯಿತು.

1973: ಸಾಮೂಹಿಕ ಪ್ರತಿಭಟನೆಗಳ ಕಾರಣದಿಂದಾಗಿ ಗ್ರೀಕ್ ಆಡಳಿತವು ದೇಶದಲ್ಲಿ ತುರ್ತುಪರಿಸ್ಥಿತಿಗೆ ಕರೆಕೊಟ್ಟಿತು.

2003: ಭಾರತೀಯ ಒಕ್ಕೂಟದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್-ಲೆನಿನಿಸ್ಟ್)ದ ಸಭೆಯು ತನ್ನ ಪಕ್ಷವನ್ನು ಕಾನು ಸನ್ಯಾಲ್‌ರ ಸಿಪಿಐ(ಎಮ್‌ಎಲ್)ಯೊಂದಿಗೆ ವಿಲೀನಗೊಳಿಸಲು ನಿರ್ಧರಿಸಿತು.

2005: ಇರಾಕ್ ರಾಜಧಾನಿ ಬಗ್ದಾದ್‌ನ ಪ್ರಮುಖ ಹೊಟೇಲೊಂದರ ಮೇಲೆ ನಡೆದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಗೆ ಸುಮಾರು 60 ಜನ ಸಾವಿಗೀಡಾದರು. 60ಕ್ಕಿಂತ ಹೆಚ್ಚು ಜನ ಗಾಯಗೊಂಡರು.

2012: 50 ಜನರನ್ನು ಹೊತ್ತು ಸಾಗುತ್ತಿದ್ದ ರಶ್ಯಾದ ವಿಮಾನವೊಂದು ರಶ್ಯಾದ ಕಝನ್ ವಿಮಾನ ನಿಲ್ದಾಣದಲ್ಲಿ ಪತನಗೊಂಡಿತು. ವಿಮಾನದಲ್ಲಿದ್ದ ಎಲ್ಲ ಜನರು ಸಾವಿಗೀಡಾದರು.

2013: ಈಜಿಪ್ಟ್‌ನ ಕೈರೋದಲ್ಲಿ ರೈಲು ಹಾಗೂ ಮಿನಿಬಸ್ ನಡುವೆ ಢಿಕ್ಕಿ ಸಂಭವಿಸಿ 20 ಜನರು ಸಾವನ್ನಪ್ಪಿದರು.

1901: ಖ್ಯಾತ ಸಿನೆಮಾ ನಿರ್ದೇಶಕ ಭಾರತದ ವಿ. ಶಾಂತಾರಾಮ್ ಅವರ ಜನ್ಮದಿನ ಇಂದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ