ಆಸ್ಟ್ರೇಲಿಯ ಗೆಲುವಿಗೆ 168 ರನ್ ಸವಾಲು

Update: 2018-11-17 18:43 GMT

ಗಯಾನ, ನ.17: ವನಿತೆಯರ ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ 8 ವಿಕೆಟ್ ನಷ್ಟದಲ್ಲಿ 167 ರನ್ ಗಳಿಸಿದೆ.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತದ ವನಿತೆಯರ ತಂಡ ಅಗ್ರ ಸರದಿಯ ಇಬ್ಬರು ಆಟಗಾರ್ತಿಯರನ್ನು ಬೇಗನೆ ಕಳೆದುಕೊಂಡಿತ್ತು. ತಾನಿಯಾ ಭಾಟಿಯಾ (2) ಮತ್ತು ಜಮೀಮ ರೋಡ್ರಿಗಸ್ 6 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಸ್ಮತಿ ಮಂಧಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ 3ನೇ ವಿಕೆಟ್‌ಗೆ 68 ರನ್‌ಗಳ ಜೊತೆಯಾಟ ನೀಡಿದರು. ಕೌರ್ 43 ರನ್(27ಎ, 3ಬೌ,3ಸಿ) ಗಳಿಸಿದರು. ಮಂಧಾನ 83ರನ್(55ಎ, 9ಬೌ,3ಸಿ) ಗಳಿಸಿ ಶತಕ ವಂಚಿತಗೊಂಡರು. ಇವರನ್ನು ಹೊರತುಪಡಿಸಿದರೆ ಯಾರಿಗೂ ಎರಡಂಕೆಯ ಸ್ಕೋರ್ ದಾಖಲಿಸಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯದ ಎಲ್ಸಿ ಪೆರ್ರಿ, 16ಕ್ಕೆ 3, ಅಸ್ಲೇಘ್ ಗಾರ್ಡನರ್ ಮತ್ತು ಡೆಲ್ಲಿಸಾ ಕಿಮ್ಮಿನ್ಸೆ ತಲಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News