ನೊವಾಕ್ ಜೊಕೊವಿಕ್ ಫೈನಲ್‌ಗೆ

Update: 2018-11-18 18:09 GMT

ಲಂಡನ್, ನ.18: ಅತ್ಯುತ್ತಮ ಪ್ರದರ್ಶನದಿಂದ ದಕ್ಷಿಣ ಆಫ್ರಿಕದ ಕೆವಿನ್ ಆ್ಯಂಡರ್ಸನ್‌ರನ್ನು ಸದೆಬಡಿದ ನೊವಾಕ್ ಜೊಕೊವಿಕ್ ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಇಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ಜೊಕೊವಿಕ್ ಅವರು ಆ್ಯಂಡರ್ಸನ್‌ರನ್ನು 6-2, 6-2 ನೇರ ಸೆಟ್‌ಗಳಿಂದ ಮಣಿಸಿದರು. ಫೈನಲ್‌ನಲ್ಲಿ ಅಲೆಕ್ಸಾಂಡರ್ ಝ್ವೆರೆವ್ ಸವಾಲು ಎದುರಿಸಲು ಸಜ್ಜಾಗಿದ್ದಾರೆ.

32ರ ಹರೆಯದ ಆ್ಯಂಡರ್ಸನ್‌ರನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿರುವ ಜೊಕೊವಿಕ್ ವರ್ಷಾಂತ್ಯದಲ್ಲಿ ನಡೆಯುವ ಎಟಿಪಿ ಫೈನಲ್ಸ್ ಟೂರ್ನಿಯಲ್ಲಿ ಆರನೇ ಬಾರಿ ಪ್ರಶಸ್ತಿ ಜಯಿಸಿ ರೋಜರ್ ಫೆಡರರ್ ದಾಖಲೆ ಸರಿಗಟ್ಟುವ ವಿಶ್ವಾಸದಲ್ಲಿದ್ದಾರೆ.

ಟೂರ್ನಮೆಂಟ್‌ನ 48 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸೆಮಿ ಫೈನಲ್‌ಗೆ ತಲುಪಿದ ದಕ್ಷಿಣ ಆಫ್ರಿಕದ ಆಟಗಾರ ಎನಿಸಿಕೊಂಡಿದ್ದ ಆ್ಯಂಡರ್ಸನ್ ಅವರು ಜೊಕೊವಿಕ್ ಅವರ ಕರಾರುವಾಕ್ ಆಟಕ್ಕೆ ನಿರುತ್ತರವಾದರು.

ಮತ್ತೊಂದು ಸೆಮಿ ಫೈನಲ್‌ನಲ್ಲಿ 21ರ ಹರೆಯದ ಝ್ವೆರೆವ್ ಸ್ವಿಸ್ ಸೂಪರ್‌ಸ್ಟಾರ್ ರೋಜರ್ ಫೆಡರರ್‌ರನ್ನು 7-5, 7-6(5) ಸೆಟ್‌ಗಳ ಅಂತರದಿಂದ ಮಣಿಸಿ ಫೈನಲ್‌ಗೆ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News