ಪ್ರೊ ಕಬಡ್ಡಿ: ಜೆಪುರಕ್ಕೆ ತಿವಿದ ಬುಲ್ಸ್

Update: 2018-11-18 18:19 GMT

ಅಹ್ಮದಾಬಾದ್, ನ.18: ಪವನ್‌ಕುಮಾರ್ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ರವಿವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ 45-32 ಅಂತರದಿಂದ ಜಯ ಸಾಧಿಸಿದೆ.

ಬುಲ್ಸ್ ಪರ ಪವನ್‌ಕುಮಾರ್ 19 ಅಂಕ ಗಳಿಸಿದರೆ, ರೋಹಿತ್(3) ಹಾಗೂ ಕಾಶಿಲಿಂಗ(5) ಬುಲ್ಸ್ ಗೆಲುವಿಗೆ ಬುನಾದಿ ಹಾಕಿಕೊಟ್ಟರು. ಜೈಪುರದ ಪರ ದೀಪಕ್ ಹೂಡಾ(11), ಅಜಿಂಕ್ಯ ಪವಾರ್(7)ಹೋರಾಟ ನೀಡಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಆತಿಥೇಯ ಗುಜರಾತ್ ಫೋರ್ಚುನ್ ಜೈಂಟ್ಸ್ ತಂಡ ಯುಪಿ ಯೋಧಾ ತಂಡವನ್ನು 27-25 ಅಂತರದಿಂದ ರೋಚಕವಾಗಿ ಮಣಿಸಿತು. ಗುಜರಾತ್ ಪರ ಸಚಿನ್(6) ಹಾಗೂ ಸುಶೀಲ್ ಕುಮಾರ್(5)ಗೆಲುವಿನ ಅಂಕ ಗಳಿಸಿದರು. ಯುಪಿ ಪರ ಶ್ರೀಕಾಂತ್ ಏಕಾಂಗಿ ಹೋರಾಟ(11 ಅಂಕ) ವ್ಯರ್ಥವಾಯಿತು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News