ಟೆಸ್ಟ್‌: ನ್ಯೂಝಿಲೆಂಡ್ ‘ಎ’ 458/9

Update: 2018-11-18 18:20 GMT

ಹ್ಯಾಮಿಲ್ಟನ್, ನ.18: ಭಾರತ ‘ಎ’ ವಿರುದ್ಧದ ಅನಧಿಕೃತ ಟೆಸ್ಟ್‌ನ ಮೂರನೇ ದಿನವಾದ ರವಿವಾರ ನ್ಯೂಝಿಲೆಂಡ್ ‘ಎ’ ತಂಡ 9 ವಿಕೆಟ್ ನಷ್ಟಕ್ಕೆ 458 ರನ್ ಗಳಿಸಿದೆ.

ಕೊನೆಯ ವಿಕೆಟ್‌ಗೆ 83 ರನ್ ಜೊತೆಯಾಟ ನಡೆಸಿದ ನ್ಯೂಝಿಲೆಂಡ್ ತಂಡ ಭಾರತದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿತು.

ಭಾರತದ ಮೊದಲ ಇನಿಂಗ್ಸ್ 8 ವಿಕೆಟ್‌ಗೆ 467 ರನ್‌ಗೆ ಉತ್ತರವಾಗಿ ನ್ಯೂಝಿಲೆಂಡ್ ‘ಎ’ ತಂಡ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 458 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು.

ನ್ಯೂಝಿಲೆಂಡ್ ಒಂದು ಹಂತದಲ್ಲಿ 9 ವಿಕೆಟ್‌ಗೆ 375 ರನ್ ಗಳಿಸಿತ್ತು. ಕಿವೀಸ್ ಬಾಲಂಗೋಚಿಗಳಾದ ಸೇಥ್ ರ್ಯಾನ್ಸ್ (ಔಟಾಗದೆ 69,57 ಎಸೆತ) ಹಾಗೂ ಬ್ಲೈರ್ ಟಿಕ್ನೆರ್(ಔಟಾಗದೆ 30)1 ಗಂಟೆ ಕಾಲ ಬ್ಯಾಟಿಂಗ್ ಮಾಡಿ ಪ್ರವಾಸಿಗರಿಗೆ ಉತ್ತಮ ಮುನ್ನಡೆ ನಿರಾಕರಿಸಿದರು.

ಭಾರತ 2ನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 35 ರನ್ ಗಳಿಸಿದೆ. ಯುವ ಆಟಗಾರ ಪೃಥ್ವ್ವಿ ಶಾ(33,26 ಎಸೆತ) ಹಾಗೂ ಮುರಳಿ ವಿಜಯ್(2)ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ಒಟ್ಟಾರೆ 44 ರನ್ ಮುನ್ನಡೆಯಲ್ಲಿದೆ.

3ನೇ ದಿನವಾದ ರವಿವಾರ ಭಾರತದ ಬೌಲರ್‌ಗಳು ಉತ್ತಮ ಆರಂಭ ಪಡೆದಿದ್ದರು. 211 ರನ್‌ಗೆ ಕಿವೀಸ್‌ನ 5 ವಿಕೆಟ್ ಉರುಳಿಸಿದ್ದರು. ಶತಕ ಸಿಡಿಸಿದ್ದ ಹ್ಯಾಮಿಶ್ ರುದರ್‌ಫೋರ್ಡ್ (114)ದೀಪಕ್ ಚಹಾರ್‌ಗೆೆ(2-51)ಕ್ಲೀನ್‌ಬೌಲ್ಡಾದರು. ಕಿವೀಸ್ ಪರ 17 ಟೆಸ್ಟ್ ಪಂದ್ಯಗಳನ್ನು ಆಡಿರುವ ರುದರ್‌ಫೋರ್ಡ್ 17 ಬೌಂಡರಿ, 1 ಸಿಕ್ಸರ್ ಸಿಡಿಸಿದ್ದರು.

ಬ್ರಾಸ್‌ವೆಲ್(48) ಹಾಗೂ ಕ್ಲೀವೆರ್(53)6ನೇ ವಿಕೆಟ್‌ಗೆ 65 ರನ್ ಜೊತೆಯಾಟ ನಡೆಸಿದರು. ಈ ಜೋಡಿಯನ್ನು ಆಫ್ ಸ್ಪಿನ್ನರ್ ಕೆ.ಗೌತಮ್(3-107) ಬೇರ್ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News