ಬೆಂಗಳೂರು: ನ.24ರಂದು ಐರ್ಲೆಂಡ್ ಶಿಕ್ಷಣ ಮೇಳ

Update: 2018-11-20 14:26 GMT

ಬೆಂಗಳೂರು, ನ.20: ಭಾರತೀಯ ವಿದ್ಯಾರ್ಥಿಗಳನ್ನು ಐರ್ಲೆಂಡ್ ವಿಶ್ವವಿದ್ಯಾಲಯಗಳತ್ತ ಆಕರ್ಷಿಸುವ ನಿಟ್ಟಿನಲ್ಲಿ ನ.24ರಂದು ನಗರದ ಎಂ.ಜಿ ರಸ್ತೆಯಲ್ಲಿರುವ ಹೊಟೇಲ್ ವಿವಾಂತ ಬೈ ತಾಜ್‌ನಲ್ಲಿ ಐರ್ಲೆಂಡ್ ಶಿಕ್ಷಣ ಮೇಳವನ್ನು ಆಯೋಜಿಸಲಾಗಿದೆ.

ಐರ್ಲೆಂಡ್ ಶಿಕ್ಷಣ ಮೇಳದಲ್ಲಿ ಪ್ರಮುಖ 20 ಐರಿಷ್ ವಿಶ್ವವಿದ್ಯಾಲಯಗಳು ಭಾಗವಹಿಸಲಿವೆ. ವೃತ್ತಿ ಮತ್ತು ಪ್ರವೇಶಕ್ಕೆ ಸಂಬಂಧಿಸಿದ ಸಲಹೆ ಮತ್ತು ಪ್ರಶ್ನೆಗಳಿಗೆ ಮಾಹಿತಿ ನೀಡಲಾಗುತ್ತದೆ. 3,500 ಭಾರತೀಯ ವಿದ್ಯಾರ್ಥಿಗಳು ಐರ್ಲೆಂಡ್‌ನಲ್ಲಿ ಶಿಕ್ಷಣ ಪಡೆಯಲು ನೋಂದಾಯಿಸಿಕೊಂಡಿದ್ದಾರೆ. ತನ್ನ ಆಯ್ಕೆಯ ಶಿಕ್ಷಣ ಸಂಸ್ಥೆಗೆ ನೇರ ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಶೈಕ್ಷಣಿಕ ಕೋರ್ಸ್‌ಗೆ ದೊರೆಯುವ ಸ್ಕಾಲರ್‌ಶಿಪ್ ಹಾಗೂ ಇತರೆ ಮಾಹಿತಿಯನ್ನು ಪಡೆಯಲು ಶಿಕ್ಷಣ ಮೇಳ ಅವಕಾಶ ಕಲ್ಪಿಸಿದೆ. ನಗರದಲ್ಲಿ ನಡೆಯುವ ಶಿಕ್ಷಣ ಮೇಳ 20 ವಿಶ್ವವಿದ್ಯಾಲಯಗಳ ಜತೆ ಮುಖಾ-ಮುಖಿ ಆಗುವ ಅವಕಾಶ ಒದಗಿಸಲಿದೆ.

ಮೇಳದಲ್ಲಿ ಭಾಗವಹಿಸುವ ವಿವಿಗಳು: ಅಥ್ಲೇನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾರ್ಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಡುಬ್ಲಿನ್ ಬ್ಯುಸಿನೆಸ್ ಸ್ಕೂಲ್, ಡುಬ್ಲಿನ್ ಸಿಟಿ ಯುನಿವರ್ಸಿಟಿ, ಡನ್‌ಡಲ್ಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗ್ರಿಫಿತ್ ಕಾಲೇಜ್, ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾರ್ಲೋ, ಲಿಮೆರಿಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ.

ಲೆಟರ್‌ಕೆನ್ನಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೆನೂತ್ ಯುನಿವರ್ಸಿಟಿ, ನ್ಯಾಷನಲ್ ಕಾಲೇಜ್ ಆಫ್ ಐರ್ಲೆಂಡ್, ನ್ಯಾಷನಲ್ ಯುನಿವರ್ಸಿಟಿ ಆಫ್ ಐರ್ಲೆಂಡ್, ಟ್ರಿನಿಟಿ ಬ್ಯುಸಿನೆಸ್ ಸ್ಕೂಲ್, ಟ್ರಿನಿಟಿ ಕಾಲೇಜ್ ಡುಬ್ಲಿನ್, ಯುಸಿಡಿ ಮೈಕಲ್ ಸ್ಮರ್ಫಿಟ್ ಗ್ರಾಜುಯೇಟ್ ಬ್ಯುಸಿನೆಸ್ ಸ್ಕೂಲ್, ಯುನಿವರ್ಸಿಟಿ ಕಾಲೇಜ್ ಕಾರ್ಕ್, ಯುನಿವರ್ಸಿಟಿ ಕಾಲೇಜ್ ಡುಬ್ಲಿನ್, ಯುನಿವರ್ಸಿಟಿ ಆಫ್ ಲಿಮೆರಿಕ್, ವಾಟರ್ಪೋರ್ಡ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಶ್ವವಿದ್ಯಾಲಗಳು ಐರ್ಲೆಂಡ್ ಶಿಕ್ಷಣ ಮೇಳದಲ್ಲಿ ಭಾಗವಹಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News