"ಪಾಕಿಸ್ತಾನಕ್ಕೆ166 ಕೋಟಿ ಡಾಲರ್ ಭದ್ರತಾ ನೆರವು ಸ್ಥಗಿತ"

Update: 2018-11-21 04:55 GMT

ವಾಷಿಂಗ್ಟನ್, ನ.21: ಪಾಕಿಸ್ತಾನಕ್ಕೆ ನೀಡಲು ಉದ್ದೇಶಿಸಿದ್ದ 166 ಕೋಟಿ ಡಾಲರ್ ಭದ್ರತಾ ನೆರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದ ಮೇರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಪೆಂಟಗಾನ್ ಪ್ರಕಟಿಸಿದೆ.

"ಪಾಕಿಸ್ತಾನಕ್ಕೆ 166 ಕೋಟಿ ಡಾಲರ್ ಭದ್ರತಾ ನೆರವನ್ನು ತಡೆಹಿಡಿಯಲಾಗಿದೆ" ಎಂದು ರಕ್ಷಣಾ ವಿಭಾಗದ ವಕ್ತಾರ ಕರ್ನಲ್ ಮ್ಯಾನಿಂಗ್ ಸ್ಪಷ್ಟಪಡಿಸಿದ್ದಾರೆ. ಆದರೆ ಈ ಬಗ್ಗೆ ಕೇಳಿದ ಇ-ಮೇಲ್ ಪ್ರಶ್ನೆಗಳಿಗೆ ಉತ್ತರಿಸಲು ರಕ್ಷಣಾ ಇಲಾಖೆ ನಿರಾಕರಿಸಿದೆ. ಈ ಬಗೆಗಿನ ವಿವರಗಳನ್ನು ಇಲಾಖೆ ಬಹಿರಂಗಪಡಿಸಿಲ್ಲ.

ಹಿಂದಿನ ಒಬಾಮಾ ಆಡಳಿತದಲ್ಲಿ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಕೇಂದ್ರ ಏಷ್ಯಾ ಭಾಗಗಳಿಗೆ ಉಪ ಸಹಾಯಕ ರಕ್ಷಣಾ ಕಾರ್ಯದರ್ಶಿಯಾಗಿದ್ದ ಡೇವಿಡ್ ಸಿಡ್ನಿ ಹೇಳುವಂತೆ, ಈ ವರ್ಷದ ಜನವರಿಯಿಂದಲೇ ಪಾಕಿಸ್ತಾನಕ್ಕೆ ನೆರವು ತಡೆಹಿಡಿಯುವ ಮೂಲಕ ಅಮೆರಿಕ ಹತಾಶೆಯ ಸಂದೇಶ ರವಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News