ಮೊದಲ ಟ್ವೆಂಟಿ-20: ಭಾರತಕ್ಕೆ 4 ರನ್ ಸೋಲು

Update: 2018-11-21 12:15 GMT

 ಬ್ರಿಸ್ಬೇನ್, ನ.21: ಭಾರತ ತಂಡ ಆಸ್ಟ್ರೇಲಿಯ ವಿರುದ್ಧ ಮಳೆ ಬಾಧಿತ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 4 ರನ್‌ನಿಂದ ಸೋತಿದೆ.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯ ತಂಡ ಸತತ ನಾಲ್ಕು ಸೋಲಿನಿಂದ ಹೊರ ಬಂದಿರುವುದಲ್ಲದೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮಳೆಯಿಂದಾಗಿ ಡಿಎಲ್ ನಿಯಮದಂತೆ ಗೆಲುವಿಗೆ 17 ಓವರ್‌ಗಳಲ್ಲಿ 174 ರನ್ ಪರಿಷ್ಕೃತ ಗುರಿ ಪಡೆದಿದ್ದ ಭಾರತ ಕೊನೆಯ ತನಕ ಹೋರಾಟ ನೀಡಿ 17 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿ ಸೋಲೊಪ್ಪಿಕೊಂಡಿತು.

 ಭಾರತದ ಪರ ಆರಂಭಿಕ ಆಟಗಾರ ಶಿಖರ್ ಧವನ್(76,42 ಎಸೆತ, 10 ಬೌಂಡರಿ, 2 ಸಿಕ್ಸರ್)ಏಕಾಂಗಿ ಹೋರಾಟ ನೀಡಿದರು. ದಿನೇಶ್ ಕಾರ್ತಿಕ್(30,13 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ರಿಷಬ್ ಪಂತ್(20,15 ಎಸೆತ, 1 ಬೌಂಡರಿ, 1 ಸಿಕ್ಸರ್)ತಂಡದ ಗೆಲುವಿಗಾಗಿ ವಿಫಲ ಯತ್ನ ನಡೆಸಿದರು.

ಆಸ್ಟ್ರೇಲಿಯದ ಪರ ಸ್ಪಿನ್ನರ್ ಆ್ಯಡಮ್ ಝಾಂಪ(2-22) ಹಾಗೂ ಸ್ಟೋನಿಸ್(2-27)ತಲಾ ಎರಡು ವಿಕೆಟ್ ಪಡೆದರು.

 ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ 17 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.

   ಆಸ್ಟ್ರೇಲಿಯ 16.1 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 153 ರನ್ ಗಳಿಸಿದ್ದಾಗ ಮಳೆ ಪಂದ್ಯಕ್ಕೆ ಅಡ್ಡಿಯಾಯಿತು. ಪಂದ್ಯ ನಿಂತ ಬಳಿಕ ಇನ್ನೊಂದು ಓವರ್ ಆಡಿದ ಆಸ್ಟ್ರೇಲಿಯ ಕೇವಲ 5 ರನ್ ಸೇರಿಸಿ ಇನ್ನೊಂದು ವಿಕೆಟ್ ಕಳೆದುಕೊಂಡಿತು.

ಆಸೀಸ್ ಆಲ್‌ರೌಂಡರ್ ಮ್ಯಾಕ್ಸ್‌ವೆಲ್(46,24 ಎಸೆತ, 4 ಸಿಕ್ಸರ್) ಹಾಗೂ ಸ್ಟೋನಿಸ್(33,19 ಎಸೆತ, 3 ಬೌಂಡರಿ, 1 ಸಿಕ್ಸರ್)ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 78 ರನ್ ಗಳಿಸಿದರು. ನಾಯಕ ಫಿಂಚ್(27) ಹಾಗೂ ಲಿನ್(37) 2ನೇ ವಿಕೆಟ್‌ಗೆ 40 ರನ್ ಜೊತೆಯಾಟ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News