ಶಾಲಾ ಬಸ್-ವ್ಯಾನ್ ಢಿಕ್ಕಿ: 7 ಮಕ್ಕಳು, ಚಾಲಕ ಮೃತ್ಯು

Update: 2018-11-22 06:47 GMT

ಮಧ್ಯಪ್ರದೇಶ, ನ.22: ಶಾಲಾ ಬಸ್ಸೊಂದು ವ್ಯಾನ್ ಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 7 ಮಕ್ಕಳು ಮತ್ತು ಬಸ್ ಚಾಲಕ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಲಕ್ಕಿ ಕಾನ್ವೆಂಟ್ ಶಾಲೆಯ ಕೆಲ ವಿದ್ಯಾರ್ಥಿಗಳು ಮತ್ತು ಇತರ 8 ಮಂದಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. “ಅಪಘಾತದಲ್ಲಿ ಕನಿಷ್ಠ 7 ಮಕ್ಕಳು ಮತ್ತು ಶಾಲಾ ಬಸ್ ಚಾಲಕ ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News