ನ್ಯಾಷನಲ್ ಮೀಡಿಯಾ ಅವಾರ್ಡ್‌ಗೆ ಅರ್ಜಿ ಆಹ್ವಾನ
Update: 2018-11-22 19:38 IST
ಬೆಂಗಳೂರು, ನ.22: ಭಾರತ ಚುನಾವಣಾ ಆಯೋಗವು ಚುನಾವಣೆ ಕುರಿತು ಮತದಾನದ ಅರಿವು, ಜಾಗೃತಿಯನ್ನು ಮತದಾರರಲ್ಲಿ ಅತ್ಯುತ್ತಮವಾಗಿ ಮೂಡಿಸಿರುವ ಮಾಧ್ಯಮದವರಿಗೆ ನ್ಯಾಷನಲ್ ಮೀಡಿಯಾ ಅವಾರ್ಡ್ 2018ನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ(ಟೆಲಿವಿಷನ್), ಆಕಾಶವಾಣಿ(ರೇಡಿಯೋ) ಹಾಗೂ ಆನ್‌ಲೈನ್(ಇಂಟರ್‌ನೆಟ್/ಸೋಶಿಯಲ್ ಮೀಡಿಯಾ) ಎಂದು ನಾಲ್ಕು ವಿಭಾಗಗಳಾಗಿ ಮಾಡಲಾಗಿದೆ. ಅರ್ಜಿ ಸಲ್ಲಿಸಲು ನ.30, 2018 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪವನ್ ದಿವಾನ್, ಅಧೀನ ಕಾರ್ಯದರ್ಶಿ, (ಕಮ್ಯುನಿಕೇಷನ್) ಭಾರತ ಚುನಾವಣಾ ಆಯೋಗ, ನಿರ್ವಾಚನ್ ಸದನ್, ಅಶೋಕ ರಸ್ತೆ, ನವ ದೆಹಲಿ -110 001. email: media.election.eci@gmail.com, diwaneci@yahoo.co.in ದೂ.011-23052133 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.