ಬಿಜೆಪಿ ಜತೆ ಜಿದ್ದಿಗೆ ಬಿದ್ದ ನಾಯ್ಡು: ಏಕತೆಯ ಪ್ರತಿಮೆಗಿಂತ ಎತ್ತರದ ವಿಧಾನಸೌಧ ನಿರ್ಮಾಣಕ್ಕೆ ಪಣ

Update: 2018-11-23 04:24 GMT

ವಿಜಯವಾಡ, ನ. 23: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜಕೀಯ ಪೈಪೋಟಿ ಕೇವಲ ಬಿಜೆಪಿ ವಿರುದ್ಧದ ಮೈತ್ರಿಕೂಟ ರಚಿಸುವುದಕ್ಕೆ ಸೀಮಿತವಾಗಿಲ್ಲ. ಗುಜರಾತ್‌ನಲ್ಲಿ ನಿರ್ಮಿಸಲಾಗಿರುವ 182 ಮೀಟರ್ ಎತ್ತರದ ಏಕತೆಯ ಪ್ರತಿಮೆಗಿಂತ 68 ಮೀಟರ್ ಅಧಿಕ ಎತ್ತರದ ವಿಧಾನಸೌಧವನ್ನು ನಿರ್ಮಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ನಾಯ್ಡು ಘೋಷಿಸಿದ್ದಾರೆ.

ಅಮರಾವತಿಯಲ್ಲಿ ನಿರ್ಮಾಣಗೊಳ್ಳಲಿರುವ ಈ ಕಟ್ಟಡ, ದೇಶದ ಅತಿ ಎತ್ತರದ ಕಟ್ಟಡ ಎಂಬ ಖ್ಯಾತಿಗೂ ಪಾತ್ರವಾಗಲಿದೆ.

ನಾಯ್ಡು ಅವರು ಈ ಕಟ್ಟಡದ ವಿನ್ಯಾಸ ನಕ್ಷೆಯನ್ನು ಬಹುತೇಕ ಅಂತಿಮಪಡಿಸಿದ್ದು, ಸಣ್ಣಪುಟ್ಟ ಬದಲಾವಣೆಗಳಷ್ಟೇ ಬಾಕಿ ಇವೆ. ಇಂಗ್ಲೆಂಡ್ ಮೂಲದ ವಾಸ್ತುಶಿಲ್ಪಿ ಇಷ್ಟರಲ್ಲೇ ನೀಲಿನಕ್ಷೆಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಮೂರು ಅಂತಸ್ತಿನ ಈ ಕಟ್ಟಡದ ಮೇಲೆ 250 ಮೀಟರ್ ಎತ್ತರದ ಗಗನಚುಂಬಿ ಗೋಪುರ ಇರುತ್ತದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News