ಖಶೋಗಿ ಹತ್ಯೆ ನಿರ್ಲಕ್ಷಿಸಲು ಟ್ರಂಪ್ ನಿರ್ಧಾರ: ಟರ್ಕಿ ಆರೋಪ

Update: 2018-11-23 17:03 GMT

ಅಂಕಾರ (ಟರ್ಕಿ), ನ. 23: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಯನ್ನು ನಿರ್ಲಕ್ಷಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉದ್ದೇಶಿಸಿದ್ದಾರೆ ಎಂದು ಟರ್ಕಿ ಶುಕ್ರವಾರ ಆರೋಪಿಸಿದೆ.

ಟರ್ಕಿಯ ನಗರ ಇಸ್ತಾಂಬುಲ್‌ನಲ್ಲಿರುವ ಸೌದಿ ಕೌನ್ಸುಲೇಟ್ ಕಚೇರಿಯಲ್ಲಿ ಅಮೆರಿಕದಲ್ಲಿ ಆಶ್ರಯ ಪಡೆದಿದ್ದ ಸೌದಿ ಪ್ರಭುತ್ವದ ಟೀಕಾಕಾರ ಖಶೋಗಿಯನ್ನು ಅಕ್ಟೋಬರ್ 2ರಂದು ಹತ್ಯೆ ಮಾಡಲಾಗಿತ್ತು.

ಈ ಹತ್ಯೆಯು ಅಮೆರಿಕ ಮತ್ತು ಸೌದಿ ಅರೇಬಿಯದ ನಡುವಿನ ಬಾಂಧವ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದಾಗಿ ಟ್ರಂಪ್ ಹೇಳಿದ ಬಳಿಕ ಟರ್ಕಿ ವಿದೇಶ ಸಚಿವ ಮೆವ್ಲತ್ ಕವುಸೊಗ್ಲು ಈ ಆರೋಪ ಮಾಡಿದ್ದಾರೆ.

‘‘ಇದು ಸರಿಯಾದ ರೀತಿಯಲ್ಲ. ಹಣವೇ ಸರ್ವಸ್ವವಲ್ಲ’’ ಎಂದು ಸಿಎನ್‌ಎನ್ ಟರ್ಕ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News