ಆಕಾಶದಲ್ಲಿ ವಾಲಿದ ವಿಮಾನ: ಪ್ರಯಾಣಿಕರಲ್ಲಿ ಆತಂಕ

Update: 2018-11-23 17:42 GMT
ಸಾಂದರ್ಭಿಕ ಚಿತ್ರ

ಹೈದರಾಬಾದ್, ನ. 23: ಹೈದರಾಬಾದ್‌ನಿಂದ ಪೋರ್ಟ್‌ಬ್ಲೇರ್‌ಗೆ ತೆರಳುತ್ತಿದ್ದ ಇಂಡಿಗೊ ವಿಮಾನ ಮಂಗಳವಾರ ಆಕಾಶದಲ್ಲಿ ವಾಲಿದ ಕಾರಣ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾದರು.

ಪ್ರಾಟ್ ಆ್ಯಂಡ್ ವ್ಹಿಟ್ನಿ ಎಂಜಿನ್ಸ್ ಶಕ್ತಿ ಹೊಂದಿರುವ ಇಂಡಿಗೊದ ಎ 320 ನಿಯೋ ವಿಮಾನ ಗುರಿಯಾಗುತ್ತಿರುವ ಸರಣಿ ಘಟನೆಗಳಲ್ಲಿ ಒಂದಾದ ಈ ಘಟನೆ ಕುರಿತು ವಿಮಾನ ನಿಯಂತ್ರಣಾ ಸಂಸ್ಥೆ ಡಿಸಿಸಿಎ ತನಿಖೆ ಆರಂಭಿಸಿದೆ. ಇದು ಯಾವುದೇ ಅಪಾಯ ಉಂಟು ಮಾಡದ ಎಂಜಿನ್‌ಗೆ ಸಂಬಂಧಿಸಿದ ಅತಿ ಸಣ್ಣ ವಿಷಯ ಎಂಬುದನ್ನು ಪೈಲೆಟ್ ಅರಿತಿದ್ದರು ಹಾಗೂ ವಿಮಾನವನ್ನು ಪೋರ್ಟ್‌ಬ್ಲೇರ್‌ನಲ್ಲಿ ಸುರಕ್ಷಿತವಾಗಿ ಇಳಿಸಿದ್ದರು ಎಂದು ಇಂಡಿಗೊ ವಕ್ತಾರರು ಹೇಳಿದ್ದಾರೆ. ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎಂಬುದು ಖಚಿತವಾಗಿಲ್ಲ.

ಎ 320 ನಿಯೋ ವಿಮಾನದಲ್ಲಿ 180ಕ್ಕಿಂತಲೂ ಅಧಿಕ ಸೀಟುಗಳಿವೆ. ಅಗತ್ಯವಿರುವ ದತ್ತಾಂಶಗಳನ್ನು ಸಂಗ್ರಹಿಸಿದ ಬಳಿಕ ಎಂಜಿನಿಯರ್‌ಗಳು ಅಥವಾ ಪೈಲೆಟ್‌ಗಳ- ಇವರಲ್ಲಿ ಯಾರ ಕಾರಣದಿಂದ ಘಟನೆ ಸಂಭವಿಸಿತು ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News