ವಿಶ್ವ ಚಾಂಪಿಯನ್ ಮೇರಿ ಕೋಮ್ ತನ್ನ ಗೆಲುವನ್ನು ಅರ್ಪಿಸಿದ್ದು ಯಾರಿಗೆ ಗೊತ್ತಾ?

Update: 2018-11-24 14:16 GMT

ಹೊಸದಿಲ್ಲಿ, ನ.24: ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ 6ನೆ ಬಾರಿ ಚಿನ್ನ ಗೆದ್ದ ಭಾರತದ ಮೇರಿ ಕೋಮ್ ತನ್ನ ಗೆಲುವನ್ನು ದೇಶಕ್ಕೆ ಅರ್ಪಿಸಿದರು.

“ಈ ಗೆಲುವನ್ನು ನಾನು ದೇಶಕ್ಕೆ ಅರ್ಪಿಸುತ್ತಿದ್ದೇನೆ” ಎಂದವರು ಸುದ್ದಿಗಾರರಿಗೆ ತಿಳಿಸಿದರು. 48 ಕೆ.ಜಿ. ವಿಭಾಗದಲ್ಲಿ ಉಕ್ರೇನ್ ನ ಹನ್ನಾ ಒಖೋಟಾರನ್ನು ಮಣಿಸಿದ ಮೇರಿ ಕೋಮ್ ಗೆಲುವಿನ ನಗೆ ಬೀರಿದರು.

ಈ ಹಿಂದೆ 2002, 2005, 2006, 2008 ಮತ್ತು 2010ರಲ್ಲಿ ಅವರು ಚಾಂಪಿಯನ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News