×
Ad

ಘನತ್ಯಾಜ್ಯ ಸಂಸ್ಕರಣೆ ಅಧ್ಯಯನ: ಫ್ರಾನ್ಸ್ ಪ್ರವಾಸಕ್ಕೆ ತೆರಳಿದ ಡಿಸಿಎಂ ಡಾ.ಪರಮೇಶ್ವರ್

Update: 2018-11-28 10:08 IST

ಬೆಂಗಳೂರು, ನ.28: ಫ್ರಾನ್ಸ್‌ ದೇಶದಲ್ಲಿನ ಘನ ತ್ಯಾಜ್ಯ ಸಂಸ್ಕರಣಾ ವಿಧಾನದ ಕುರಿತು ಅಧ್ಯಯನ ನಡೆಸಲು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ಇಂದಿನಿಂದ ಆರು ದಿನಗಳ ಪ್ರವಾಸ ಆರಂಭಿಸಿದ್ದಾರೆ.

ನ.28ರಿಂದ ಡಿ. 3ರವರೆಗಿನ ಈ ಅಧ್ಯಯನ ಪ್ರವಾಸದಲ್ಲಿ ಡಾ.ಜಿ.ಪರಮೇಶ್ವರ್‌ ಜೊತೆ ಬಿಬಿಎಂಪಿ ಆಯುಕ್ತ ಮಂಜುನಾಥ್‌‌ ಪ್ರಸಾದ್ ಹಾಗೂ ಅಪರ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್‌  ಕೂಡಾ ತೆರಳಲಿದ್ದಾರೆ.

ಫ್ರಾನ್ಸ್‌ ದೇಶದ ಮಹಾನಗರಗಳಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯಗಳನ್ನು ಸಂಸ್ಕರಣೆ ಮಾಡುವ ವಿಧಾನ ಉತ್ತಮವಾಗಿದ್ದು, ಆ ಮಾದರಿಯನ್ನು ಅಧ್ಯಯನ ಮಾಡಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News