×
Ad

ಡಿ.3 ರಂದು ಬೀಡಿ ಕಾರ್ಮಿಕರ ಬೆಂಗಳೂರು ಚಲೋ

Update: 2018-11-30 19:36 IST

ಬೆಂಗಳೂರು, ನ.30: ಬೀಡಿ ಕಾರ್ಮಿಕರಿಗೆ ನಿಗದಿಯಾದ ಕನಿಷ್ಠ ಕೂಲಿ ವೇತನವನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿ ಡಿ.3ರಂದು ಬೆಂಗಳೂರು ಚಲೋ ಹಾಗೂ ನಗರದ ಕಾರ್ಮಿಕ ಭವನದ ಮುಂದೆ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಬಿ.ಎಂ.ಭಟ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರ ಎ.1ರಂದು ಕರ್ನಾಟಕ ರಾಜ್ಯ ಸರಕಾರವು ನೂತನ ಆದೇಶವನ್ನು ಹೊರಡಿಸಿ ಒಂದು ಸಾವಿರ ಬೀಡಿಗೆ 220.52ರೂ. ವೇತನ ಜಾರಿಗೊಳಿಸಿದೆ. ಆದರೆ, ಬೀಡಿ ಮಾಲಕರು ಇದನ್ನು ಜಾರಿ ಮಾಡದೆ ಕಾರ್ಮಿಕರಿಗೆ ಒಂದು ಸಾವಿರ ಬೀಡಿಗೆ 180.54ರೂ. ನಂತೆ ಮಾತ್ರ ವೇತನ ನೀಡುತ್ತಿದ್ದು, ರಾಜ್ಯದ ಲಕ್ಷಾಂತರ ಬೀಡಿ ಕಾರ್ಮಿಕರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿದರು.

2015ರ ಎಪ್ರಿಲ್ 15ರಂದು ಒಂದು ದಿನಕ್ಕೆ 12.75ರೂ. ತುಟ್ಟಿ ಭತ್ತೆ ನೀಡಬೇಕಿತ್ತು. ಆದರೆ ಇದುವರೆಗೂ ನೀಡದೆ ಕಾರ್ಮಿಕರಿಗೆ ವಂಚಿಸಿದ್ದಾರೆ. ಆದ್ದರಿಂದ, ಈ ಹಣವನ್ನು ಕಾರ್ಮಿಕರಿಗೆ ತಲುಪಿಸುವ ಮೂಲಕ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಡಿ.3ರಂದು ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News