ಡಬ್ಲ್ಯುಡಬ್ಲ್ಯುಇ ಸೂಪರ್ ಸ್ಟಾರ್ ಜಾನ್ ಸೀನಾಗೆ 'ಮುಹಮ್ಮದ್ ಅಲಿ ಲೆಗೆಸಿ' ಪ್ರಶಸ್ತಿ

Update: 2018-12-01 08:26 GMT

ವಾಷಿಂಗ್ಟನ್, ಡಿ. 1 : ಡಬ್ಲ್ಯುಡಬ್ಲ್ಯುಇ ಸೂಪರ್ ಸ್ಟಾರ್ ಜಾನ್ ಸೀನಾ ಈ ವರ್ಷದ ಪ್ರತಿಷ್ಠಿತ ಮುಹಮ್ಮದ್ ಅಲಿ ಲೆಗೆಸಿ ಅವಾರ್ಡ್  ತಮ್ಮದಾಗಿಸಿಕೊಂಡಿದ್ದಾರೆ. ಅಮೆರಿಕಾದ ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್  ಮ್ಯಾಗಝೀನ್ ಈ ಪ್ರಶಸ್ತಿಯನ್ನು ಅವರ ಸಮಾಜ ಸೇವಾ ಚಟುವಟಿಕೆಗಳಿಗಾಗಿ ನೀಡುತ್ತಿದೆ.

ತನ್ನ ಕ್ರೀಡಾ ಸಾಧನೆಯ ವೇದಿಕೆಯನ್ನು ಬಳಸಿಕೊಂಡು ಸಮಾಜ ಸೇವಾ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಅಪ್ರತಿಮ ಕ್ರೀಡಾ ಮನೋಭಾವ ಹಾಗೂ ನಾಯಕತ್ವ ಗುಣ ಹೊಂದಿರುವ ಕ್ರೀಡಾಳುವಿಗೆ ಪ್ರತಿ ವರ್ಷ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತಿದೆ.

ಜಾನ್ ಸೀನಾ ಅವರು ಮೇಕ್ ಎ ವಿಶ್ ಫೌಂಡೇಶನ್ ಜತೆಗೂ ನಿಕಟವಾಗಿ ಕೆಲಸ ಮಾಡುತ್ತಿದ್ದು, ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ಸುಮಾರು 600 ಮಕ್ಕಳ ಆಸೆಗಳನ್ನು ನೆರವೇರಿಸಿದ್ದು ಇದು ಫೌಂಡೇಶನ್ ಪಾಲಿಗೆ ಒಂದು ದಾಖಲೆಯಾಗಿದೆ.

ಹದಿನಾರು ಬಾರಿಯ ವಿಶ್ವ ಚಾಂಪಿಯನ್ ಕುಸ್ತಿ ಪಟುವಾಗಿರುವ 41 ವರ್ಷದ ಜಾನ್ ಸೀನಾ ಈ ವರ್ಷ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ಕುಸ್ತಿಯಲ್ಲಿ ತೊಡಗಿಸಿಕೊಂಡಿಲ್ಲ. ಹಾಲಿವುಡ್‍ನಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಅವರು ಡಬ್ಲ್ಯುಡಬ್ಲ್ಯುಇಯಲ್ಲಿ ಕೊನೆಯ ಬಾರಿ ಮೆಲ್ಬೋರ್ನ್‍ನ ಸೂಪರ್ ಶೋಡೌನ್‍ನಲ್ಲಿ ಕಳೆದ ತಿಂಗಳು ಕಾಣಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News