ಡಿ.5 ರಿಂದ ಬೆಳಗಾವಿಯಿಂದ ಬೆಂಗಳೂರಿನವರೆಗೆ ಮಹಿಳಾ ಸೈಕಲ್ ರ‍್ಯಾಲಿ
Update: 2018-12-01 19:49 IST
ಬೆಂಗಳೂರು, ಡಿ.1: ಬೆಳಗಾವಿಯಿಂದ ಬೆಂಗಳೂರಿನವರೆಗೆ ಡಿ.5ರಿಂದ ನಾಲ್ಕು ದಿನದವರೆಗೆ ಕೆಎಸ್‌ಆರ್‌ಪಿ, ಉಮೀದ್ 1ಸಾವಿರ ಸೈಕ್ಲೊಥಾನ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ಸಹಯೋಗದಲ್ಲಿ ಮಹಿಳಾ ಸೈಕಲ್ ರ್ಯಾಲಿಯನ್ನು ಆಯೋಜಿಸಲಾಗಿದೆ.
ರ್ಯಾಲಿಯಲ್ಲಿ ನೂರು ಮಹಿಳಾ ಸೈಕಲಿಸ್ಟ್, 50 ಮಹಿಳಾ ಪೊಲೀಸ್ ಸಿಬ್ಬಂದಿಗಳು, 10 ಮಹಿಳಾ ಐಎಎಸ್.ಐಪಿಎಸ್, ಕೆಎಎಸ್ ಹಾಗೂ ಕೆಎಸ್‌ಪಿಎಸ್ ಅಧಿಕಾರಿಗಳು ಸೇರಿದಂತೆ ಸಂಘ-ಸಂಸ್ಥೆಗಳಿಂದ 40 ಮಹಿಳಾ ಸೈಕಲಿಸ್ಟ್‌ಗಳು ಭಾಗವಹಿಸಲಿದ್ದಾರೆ.
ರ್ಯಾಲಿಯ ಪ್ರಮುಖ ಉದ್ದೇಶ ಮಹಿಳಾ ಸಬಲೀಕರಣ, ಮಹಿಳಾ ಶಿಕ್ಷಣ, ಸ್ವಚ್ಛ ಭಾರತ್, ವೃಕ್ಷಾರೋಹಣ, ಬಾಲ್ಯ ವಿವಾಹ ಪದ್ಧತಿಯಿಂದಾಗುವ ದುಷ್ಟರಿಣಾಮಗಳ ಕುರಿತು ಜಾಗೃತಿ, ಮಹಿಳಾ ನೈರ್ಮಲೀಕರಣ ಮುಂತಾದ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಲ್ಲಿ ವಿಶೇಷವಾಗಿ ಗ್ರಾಮೀಣ ಮಹಿಳೆಯರು ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು.