ಭೋಪಾಲ್ ಅನಿಲ ದುರಂತ

Update: 2018-12-01 18:46 GMT

1914: ವಿಶ್ವ ಪ್ರಥಮ ಮಹಾಯುದ್ಧದಲ್ಲಿ ಆಸ್ಟ್ರಿಯಾ ಸೈನ್ಯವು ಸೆರ್ಬಿಯಾದ ಬೆಲ್‌ಗ್ರೇಡ್‌ನ್ನು ವಶಪಡಿಸಿಕೊಂಡಿತು.

1959: ಮಲ್ಪಾಸೆಟ್ ಅಣೆಕಟ್ಟು ಒಡೆದ ಪರಿಣಾಮ ಉಂಟಾದ ಮಹಾ ಪ್ರವಾಹದಿಂದಾಗಿ ಫ್ರಾನ್ಸ್‌ನ ಫ್ರೆಜುಸ್ ನಗರ ನಾಶವಾಯಿತು.

1960: ಬ್ರಿಟಿಷ್ ಪುರಾತತ್ವಶಾಸ್ತ್ರಜ್ಞ ಲೂಯಿಸ್ ಲೀಕಿ ಎಂಬವರು ತಾಂಝಾನಿಯಾದ ಓಲ್ಡ್ ವೈ ಜಾರ್ಜ್ ಎಂಬಲ್ಲಿ 1.4 ಮಿಲಿಯನ್ ವರ್ಷಗಳ ಹಿಂದಿನ ಮುಂದುವರಿದ ಮಾನವ ಜನಾಂಗದ ಪಳೆಯುಳಿಕೆಯನ್ನು ಅನ್ವೇಷಿಸಿದರು.

1971: ಸೋವಿಯತ್ ಒಕ್ಕೂಟದ ಬಾಹ್ಯಾಕಾಶ ನೌಕೆ ಮಾರ್ಸ್ 3 ಇಂದು ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿಯಿತು.

1976: ಕ್ಯೂಬಾದ ಅಧ್ಯಕ್ಷರಾಗಿ ಕಮ್ಯುನಿಸ್ಟ್ ನಾಯಕ ಫಿಡೆಲ್ ಕ್ಯಾಸ್ಟ್ರೋ ಆಯ್ಕೆಯಾದರು.

1984 : ಭೋಪಾಲ್ ದುರಂತ ಅಥವಾ ಭೋಪಾಲ್ ಅನಿಲ ದುರಂತ ಎಂದು ಕರೆಯಲಾಗುವ ಅನಿಲ ಸೋರಿಕೆ ಘಟನೆಯು ಡಿ.2 ಮತ್ತು 3ರ ಮಧ್ಯರಾತ್ರಿ ನಡೆಯಿತು. ಮಧ್ಯಪ್ರದೇಶದ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿ. ಕಂಪೆನಿಯ ಕ್ರಿಮಿನಾಶಕ ಘಟಕದಲ್ಲಿ ಸಂಭವಿಸಿದ ಈ ದುರಂತವನ್ನು ವಿಶ್ವದ ಮಹಾ ಕೈಗಾರಿಕಾ ದುರಂತವೆಂದು ಹೇಳಲಾಗಿದೆ. ಸುಮಾರು 5,00,000 ಜನರನ್ನು ಮಿಥೇಲ್ ಐಸೋಸೈನೆಟ್ ಅನಿಲ ಸೋರಿಕೆ ಬಾಧಿಸಿತು. ಈ ದುರಂತದಲ್ಲಿ ಮಡಿದ ಜನರ ಸಂಖ್ಯೆಯಲ್ಲಿ ಗೊಂದಲವಿತ್ತು. ಅನಿಲ ಸೋರಿಕೆಯಿಂದ 3,787 ಜನ ಸಾವನ್ನಪ್ಪಿದ್ದಾರೆ ಎಂದು ಮಧ್ಯಪ್ರದೆೇಶದ ಸರಕಾರ ದೃಢಪಡಿಸಿತು. ಅನಧಿಕೃತ ವರದಿಯ ಪ್ರಕಾರ ಸಾವಿನ ಸಂಖ್ಯೆ 8,000ಕ್ಕಿಂತ ಹೆಚ್ಚು.

1989: ಭಾರತದ 8ನೇ ಪ್ರಧಾನಿಯಾಗಿ ವಿ.ಪಿ.ಸಿಂಗ್ ಈ ದಿನ ಪ್ರಮಾಣವಚನ ಸ್ವೀಕರಿಸಿದರು.

2014: ಕೃತಕ ಬುದ್ಧಿಮತ್ತೆೆಯು ಮಾನವ ಜನಾಂಗಕ್ಕೆ ಅಪಾಯಕಾರಿ ಎಂದು ಜಗತ್ಪ್ರಸಿದ್ಧ ಭೌತಶಾಸ್ತ್ರಜ್ಞ ಸ್ಟಿಫನ್ ಹಾಕಿಂಗ್ ಎಚ್ಚರಿಸಿದರು. ಇದು ಮಾನವ ಜನಾಂಗವನ್ನೇ ಕೊನೆಗಾಣಿಸಬಹುದು ಎಂದರು.

1855: ರಾಷ್ಟ್ರೀಯವಾದಿ ಹಾಗೂ ಸಮಾಜ ಸುಧಾರಕ ನಾರಾಯಣ್ ಗಣೇಶ್ ಚಂದಾವರ್‌ಕರ್ ಜನ್ಮದಿನ ಇಂದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ