ಕೆಸಿಎಫ್ ಕತಾರ್ ಝೋನ್: ಸ್ವಲಾತ್ ವಾರ್ಷಿಕ, ಮೀಲಾದ್ ಕಾರ್ಯಕ್ರಮ

Update: 2018-12-02 11:57 GMT

ದೋಹಾ,ಡಿ.2: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕತಾರ್ ಅಝೀಝಿಯ ಝೋನ್ ವತಿಯಿಂದ ಸ್ವಲಾತ್ ವಾರ್ಷಿಕ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮ ಶುಕ್ರವಾರ ಜುಮಾ ನಮಾಜಿನ ಬಳಿಕ ನಡೆಯಿತು.  

ಸಂಘಟನಾ ವಿಭಾಗದ ಅಧ್ಯಕ್ಷ ಯೂಸುಫ್ ಸಖಾಫಿ ಅಯ್ಯಂಗೇರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಹಾಫಿಲ್ ಉಮರುಲ್ ಫಾರೂಕ್ ಸಖಾಫಿ ವಹಿಸಿದ್ದರು. ಸ್ವಲಾತ್ ಮಜ್ಲಿಸ್ ನೇತೃತ್ವವನ್ನು ಹಾಫಿಲ್ ಮುಬಾರಕ್ ಸಖಾಫಿ ಪುಂಜಾಲಕಟ್ಟೆ ಅವರು ವಹಿಸಿದ್ದರು.

ನಝೀರ್ ಸಖಾಫಿ ಮತ್ತು ತಂಡದವರಿಂದ ಅತ್ಯಾಕರ್ಷಕ ಬುರ್ದಾ ಮಜ್ಲಿಸ್ ನಡೆಯಿತು. ಪ್ರತಿಭೋತ್ಸವದಲ್ಲಿ ವಿಜೇತರಾದವರಿಗೆ ಸಂಘಟನೆಯ ನೇತಾರರಾದ ಕಬೀರ್ ದೇರಳಕಟ್ಟೆ ಹಾಗೂ ಅಂದುಮಾಯಿ ನಾವುಂದ ರವರು ಪ್ರಶಸ್ತಿ ವಿತರಿಸಿದರು. ಅಲ್ಲದೆ ಪ್ರಸ್ತುತ ಝೋನ್ ನ ಹಿರಿಯ ಸದಸ್ಯ ಹಾಗೂ ಮಾದರಿ ಕಾರ್ಯಕರ್ತ ಇಬ್ರಾಹಿಂ ಮಲಾರ್ ರವರನ್ನು ಸನ್ಮಾನಿಸಲಾಯಿತು.

ಅಝೀಝಿಯ ಝೋನ್ ಅಧ್ಯಕ್ಷ ಖಾಲಿದ್ ಹಿಮಮಿಯವರು ಸ್ವಾಗತಿಸಿ, ಆಸೀಫ್ ಕರ್ಪಾಡಿ ಯವರು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಫಾರೂಕ್ ಕೃಷ್ಣಾಪುರರವರು ನಡೆಸಿಕೊಟ್ಟರು. 

ಡಿಸೆಂಬರ್ 3 ನೇ ತಾರೀಕಿನಂದು ಮಂಗಳೂರಿನ ನೆಹರೂ ಮೈದಾನ ದಲ್ಲಿ ನಡೆಯಲಿರುವ ಸಾಮುದಾಯಿಕ ಸಮ್ಮಿಲನದ ಪ್ರಚಾರಾರ್ಥ ಪೋಸ್ಟರ್ ಬಿಡುಗಡೆ ಗೊಳಿಸಲಾಯಿತು. ಇಶಾ ನಮಾಜಿನ ಬಳಿಕ ದೋಹಾ ಜೋನ್ ನ ವತಿಯಿಂದ ಮೀಲಾದ್ ಕಾರ್ಯಕ್ರಮ ನಡೆಯಿತು.

ಖಾಲಿದ್ ಹಿಮಾಮಿ ಮೌಲಿದ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಸಿ.ಎಫ್ ಕತರ್ ನ್ಯಾಷನಲ್ ಕಮೀಟಿ ಸದಸ್ಯ ಕಬೀರ್ ದೇರಳಕಟ್ಟೆ ವಹಿಸಿದರು. ಸಂಘಟನಾ ಅಧ್ಯಕ್ಷ ಹಾಫಿಳ್ ಉಮರುಲ್ ಫಾರೂಕ್ ಸಖಾಫಿ ಯುವತ್ವ ಹಾಗು ಬಿಡುವಿನ ಸಮಯದ ಮಹತ್ವದ ಕುರಿತು ಮುಖ್ಯ ಪ್ರಭಾಷಣ ನಡೆಸಿ ದುಆ ಆಶೀರ್ವಚನಗೈದರು. ಮುಖ್ಯ ಅತಿಥಿಗಳಾಗಿ ಯೂಸುಫ್ ಸಖಾಫಿ, ಫಾರುಖ್ ಕೃಷ್ಣಾಪುರ, ಅಂದುಮಾಯಿ ನಾವುಂದ, ಇಕ್ಬಾಲ್ ಪೂಂಜಲಕಟ್ಟೆ ಸಿದ್ದಿಕ್ ಕೃಷ್ಣಾಪುರ ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News