ಗುಜರಾತ್ ವಿರುದ್ಧ ಕೊನೆಗೂ ಗೆದ್ದ ಮುಂಬಾ

Update: 2018-12-02 18:43 GMT

ಹೊಸದಿಲ್ಲಿ, ಡಿ.2: ಪ್ರೊ ಕಬಡ್ಡಿ ಲೀಗ್‌ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಯು ಮುಂಬಾ ತಂಡ ಗುಜರಾತ್ ಫೋರ್ಚುನ್ ಜೈಂಟ್ಸ್ ತಂಡವನ್ನು 36-26 ಅಂಕಗಳ ಅಂತರದಿಂದ ಮಣಿಸಿತು.

ಪ್ರೊ ಕಬಡ್ಡಿ ಲೀಗ್‌ನ ಇತಿಹಾಸದಲ್ಲಿ ತನ್ನ ಆರನೇ ಪ್ರಯತ್ನದಲ್ಲಿ ಮುಂಬಾ ತಂಡ ಗುಜರಾತ್ ವಿರುದ್ಧ ಮೊದಲ ಜಯ ಸಾಧಿಸಿತು. ಮುಂಬಾ ಪರ ಸಿದ್ದಾರ್ಥ್ ದೇಸಾಯಿ(6), ರೋಹಿತ್ ರಾಣಾ(6), ರೋಹಿತ್ ಬಲಿಯನ್(6) ಹಾಗೂ ಧರ್ಮರಾಜ್(6)ತಲಾ ಆರು ಅಂಕ ಗಳಿಸಿದರು. ಗುಜರಾತ್ ಪರ ಸಚಿನ್(8) ಹಾಗೂ ಪ್ರಪಂಜನ್(4) ಅಂಕ ಗಳಿಸಿದರು. ಯು ಮುಂಬಾ ಎ ಗುಂಪಿನಲ್ಲಿ 18 ಪಂದ್ಯಗಳಲ್ಲಿ 72 ಅಂಕ ಗಳಿಸಿ ಅಗ್ರ ಸ್ಥಾನದಲ್ಲಿದೆ. ಗುಜರಾತ್ ತಂಡ 16 ಪಂದ್ಯಗಳಲ್ಲಿ 63 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದೆ.

ದಿನದ ಮತ್ತೊಂದು ಪಂದ್ಯದಲ್ಲಿ ದಿಲ್ಲಿ ದಬಾಂಗ್ ತಂಡ ಪುಣೇರಿ ಪಲ್ಟನ್ ತಂಡವನ್ನು 35-24 ಅಂತರದಿಂದ ಮಣಿಸಿತು. ದಿಲ್ಲಿ ಪರ ಮಿರಾಜ್ ಶೇಕ್(7)ಹಾಗೂ ನವೀನ್ ಕುಮಾರ್(7) ತಲಾ 7 ಅಂಕ ಗಳಿಸಿದರು. ಪುಣೇರಿ ಪರವಾಗಿ ದೀಪಕ್‌ಕುಮಾರ್(10) ಹಾಗೂ ಸಂದೀಪ್ ನರ್ವಾಲ್ 4 ಅಂಕ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News