ಅಂಬೇಡ್ಕರ್ ಭಾರತದ ಬಗ್ಗೆ ಯಾವ ಎಚ್ಚರಿಕೆ ಕೊಟ್ಟಿದ್ದರೋ ಬಿಜೆಪಿ ಸರಕಾರ ಅದನ್ನೇ ಈಗ ನಿಜಗೊಳಿಸುತ್ತಿದೆ

Update: 2018-12-03 18:38 GMT

ಬಾಬಾ ಸಾಹೇಬ್ ಅಂಬೇಡ್ಕರ್ ತನ್ನ ‘ದಿ ಪ್ರಾಬ್ಲಮ್ ಆಫ್ ದಿ ರುಪೀ: ಹಿಟ್ಸ್ ಒರಿಜಿನ್ ಆ್ಯಂಡ್ ಇಟ್ಸ್ ಸೆಲ್ಯೂಷನ್’ ಎಂಬ ಪುಸ್ತಕದಲ್ಲಿ ಹಣಕಾಸು ನೀತಿಯ ಮೇಲೆ ಸರಕಾರ ನಿಯಂತ್ರಣ ಇರಬಹುದೆಂಬ ತನ್ನ ಭಯವನ್ನು ವ್ಯಕ್ತಪಡಿಸಿದ್ದರು.
‘‘ನಗದಿನ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರವನ್ನು ಒಂದು ಸರಕಾರಕ್ಕೆ ನೀಡುವುದು ಅಪಾಯಕಾರಿಯಾದರೆ, ಆ ಅಧಿಕಾರವನ್ನು ಭಾರತ ಸರಕಾರಕ್ಕೆ ನೀಡುವುದು ಅತ್ಯಂತ ಅಪಾಯಕಾರಿ’’ ಎಂದಿದ್ದರು ಅವರು.
ಅಂಬೇಡ್ಕರ್ ಹಣಕಾಸು ನೀತಿಯಲ್ಲಿ ಸರಕಾರ ಮಧ್ಯ ಪ್ರವೇಶಿಸುವುದನ್ನು ಅಥವಾ ಅದನ್ನು ನಿಯಂತ್ರಿಸುವುದನ್ನು ವಿರೋಧಿಸಿದ್ದರು.


 ಅಧಿಕಾರಕ್ಕೆ ಬಂದ ಕ್ಷಣದಿಂದ ಬಿಜೆಪಿ ಸರಕಾರ ಈ ದೇಶದ ಪ್ರತಿಯೊಂದು ಸಂಸ್ಥೆಯನ್ನು ನಾಶ ಮಾಡುತ್ತಿದೆ. ಪೂನಾ ಫಿಲ್ಮ್ ಇನ್‌ಸ್ಟಿಟ್ಯೂಟ್ ಇತಿಹಾಸ ಸಂಶೋಧನೆಯ ಭಾರತೀಯ ಮಂಡಳಿ (ಐಸಿಎಚ್‌ಆರ್), ಶಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡಿಯಂತಹ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳು ಅಧಿಕಾರಶಾಹಿ ಹಾಗೂ ಆರ್ಥಿಕ ಸಂಸ್ಥೆಗಳು ಎಲ್ಲವನ್ನೂ ಅದು ಈಗ ಬೇಟೆಯಾಡುತ್ತಿದೆ.

ಸಂಸ್ಥೆಗಳನ್ನು ನಾಶಮಾಡುವ ಈ ಅಭಿಯಾನದಲ್ಲಿ ಸರಕಾರ ಎರಡು ರೀತಿಯ ಅಸ್ತ್ರಗಳನ್ನು ಬಳಸುತ್ತಿದೆ. ಒಂದು ಆರೆಸ್ಸೆಸ್ ಸಂಬಂಧವುಳ್ಳ ವ್ಯಕ್ತಿಗಳನ್ನು ಈ ಸಂಸ್ಥೆಗಳ ಒಳಗೆ ತೂರುವುದು ಮತ್ತು ಎರಡನೆಯದಾಗಿ ಈ ಸಂಸ್ಥೆಗಳನ್ನು ಬಲವಂತವಾಗಿ ಸ್ವಾಯುತ್ತಗೊಳಿಸುವುದು ಅಥವಾ ಸ್ವಾಯತ್ತೆಯನ್ನು ಬಲವಂತವಾಗಿ ತನಗೆ ಬೇಕಾದಂತೆ ಬಳಸಿಕೊಳ್ಳುವುದು. ಪ್ರತಿಯೊಂದು ಸ್ವಾಯತ್ತ ಸಂಸ್ಥೆಯೂ ಈಗ ಕೇವಲ ಒಂದು ಜೋಕ್ ಆಗಿದೆ. ಇತ್ತೀಚೆಗೆ ಸಿಬಿಐ ಸರಕಾರದ ಬೋನಿಗೆ ಬಿದ್ದ ಬಳಿಕ ಈಗ ಆರ್‌ಬಿಐ ಸರಕಾರದ ಕುಣಿಕೆಗೆ ಬಿದ್ದಿರುವ ಬಲಿಪಶುವಾಗಿದೆ. ಇದಕ್ಕಾಗಿ ಎಂಬತ್ತ್ತ ಮೂರು ವರ್ಷಗಳ ಹಿಂದೆ ಅಂಗೀಕರಿಸಲಾದ ಆರ್‌ಬಿಐ ಕಾಯ್ದೆಯ ಸೆಕ್ಷನ್‌ಗಳನ್ನು ಸರಕಾರ ಮೊತ್ತ ಮೊದಲ ಬಾರಿಗೆ ಬಳಸಲು ತೀರ್ಮಾನಿಸಿದೆ.

ಈಗ ಚರ್ಚಾಸ್ಪದವಾದ ಮೂರು ಮುಖ್ಯ ವಿಷಯಗಳೆಂದರೆ ಮರಳಿ ಬಾರದ ಸಾಲಗಳಿಗೆ ಸಂಬಂಧಿಸಿದ ನಿಯಮಗಳಿಂದ ಇಂಧನ ಕಂಪೆನಿಗಳಿಗೆ ವಿನಾಯಿತಿ ನೀಡುವುದು, ದಿವಾಳಿ ಬಿಕ್ಕಟ್ಟನ್ನು ಬಗೆಹರಿಸುವುದು ಮತ್ತು ಸಾರ್ವಜನಿಕ ರಂಗದ ಬ್ಯಾಂಕುಗಳ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಹಿಂದೆೆಗೆದುಕೊಳ್ಳುವುದು. ತನ್ನ ಗುರಿಯನ್ನು ಸಾಧಿಸಿಕೊಳ್ಳುವುದಕ್ಕಾಗಿ ಸರಕಾರವು ಆರ್‌ಬಿಐ ಕಾಯ್ದೆಯ ಸೆಕ್ಷನ್ 7(1) ಸೆಕ್ಷನ್ 7(2) ಮತ್ತು 7(3) ನಿಯಮಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಇತ್ತೀಚಿನ ಒಂದು ಸಂದರ್ಶನದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿಯವರು ‘‘ಆರ್‌ಬಿಐ ಬೇಕಾಬಿಟ್ಟಿ ಬ್ಯಾಂಕ್ ಸಾಲ ನೀಡಿಕೆಯನ್ನು ತಡೆಯದಿದ್ದುದೇ ಸಾಲ ಪಾವತಿ ಬಿಕ್ಕಟ್ಟಿಗೆ ಕಾರಣ’’ವೆಂದು ಆರ್‌ಬಿಐ ಮೇಲೆ ಗೂಬೆ ಕೂರಿಸಿದ್ದಾರೆ. ಆದರೆ ಆರ್‌ಬಿಐ, ಸರಕಾರ ತನ್ನ ನೀತಿಯಲ್ಲಿ ಮಾಡಿದ ಬದಲಾವಣೆಗಳೇ ಇಂಧನ ರಂಗದ ಬಿಕ್ಕಟ್ಟಿಗೆ ಕಾರಣವೆಂದು ಸರಕಾರವನ್ನು ದೂಷಿಸಿದೆ.

‘‘ಸರಕಾರವು 2019ರ ಸಾರ್ವತ್ರಿಕ ಚುನಾವಣೆಗಳ ಮೇಲೆ ಕಣ್ಣಿಟ್ಟಿದೆ ಎಂಬುದು ಸ್ಪಷ್ಟ. ಬ್ಯಾಂಕಿಂಗ್ ರಂಗದಲ್ಲಿ ನಗದಿನ ಕೊರತೆ ಇರುವುದರಿಂದಾಗಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರ ಉದ್ಯಮಗಳು ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿವೆ’’ ಎಂದಿದ್ದಾರೆ ರಿಸರ್ವ್ ಬ್ಯಾಂಕ್‌ನ ಓರ್ವ ನಿರ್ದೇಶಕರು.
ಸರಕಾರ ಮತ್ತು ಆರ್‌ಬಿಐ ನಡುವೆ ತಿಕ್ಕಾಟ ಹೊಸತೇನೂ ಅಲ್ಲ. ಬಡ್ಡಿ ದರಗಳು, ಸಾಲ ಸಂಬಂಧಿ ವಿಷಯಗಳು ಇತ್ಯಾದಿಗಳ ಬಗ್ಗೆ ಕಾಂಗ್ರೆಸ್ ಆಡಳಿತದಲ್ಲೂ ಈ ತಿಕ್ಕಾಟ ನಡೆದಿತ್ತು. ಆದರೆ ಈಗಿನ ಮಟ್ಟದಲ್ಲಿ ಅಲ್ಲ. ಈಗ ತಮ್ಮ ಸಬ್ಸಿಡಿ ಹಕ್ಕುಗಳನ್ನು ಬಿಟ್ಟುಕೊಡುವಂತೆ ಜನರನ್ನು ಬಲವಂತ ಮಾಡಲಾಗಿದೆ ಮತ್ತು ಗ್ಯಾಸ್ ದರ ರೂ. 1,000ದ ವರೆಗೂ ಏರಿದೆ. ಸಿರಿವಂತ ತೈಲ ಕಂಪೆನಿಗಳಿಗೆ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪ್ರತಿದಿನ ನಿರ್ಧರಿಸುವ ಹಕ್ಕನ್ನು ನೀಡಲಾಗಿದೆ. ಇವೆರಡರ ಬೆಲೆ ಅನುಕ್ರಮವಾಗಿ ಶೇ. 13 ಮತ್ತು ಶೇ. 28ರಷ್ಟು ಏರಿಕೆಯಾಗಿದೆ.

ನೀರವ್ ಮೋದಿ, ವಿಜಯ ಮಲ್ಯರಂತಹವರು ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂಪಾಯಿ ಕೊಳ್ಳೆ ಹೊಡೆದು ವಿದೇಶಕ್ಕೆ ಪಲಾಯನ ಮಾಡುತ್ತಿರುವಾಗ ಬ್ಯಾಂಕ್‌ಗಳು ದುಡಿಯುವ ವರ್ಗ ಹಾಗೂ ಮಧ್ಯಮ ವರ್ಗದಿಂದ ಹಣ ಲೂಟಿ ಮಾಡುತ್ತಿವೆ. ಹೊಸ ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್ ನಿಯಮದ ಪ್ರಕಾರ ಗ್ರಾಹಕರಿಂದ ಎಸ್‌ಬಿಐ 2017ರ ಎಪ್ರಿಲ್-ನವೆಂಬರ್ ಅವಧಿಯಲ್ಲಿ ರೂ. 1,581 ಕೋಟಿ ರೂಪಾಯಿ ಲಾಭ ಗಳಿಸಿತು. ಇದು ಎಪ್ರಿಲ್- ಸೆಪ್ಟಂಬರ್ ನಡುವೆ ಎಸ್‌ಬಿಐ ಗಳಿಸಿದ ಒಟ್ಟು ಲಾಭದ ಅರ್ಧ ಪಾಲಿನಷ್ಟಾಗುತ್ತದೆ.

ಭಾರತದ ಅತ್ಯಂತ ಶ್ರೀಮಂತರಾದ ಐದು ಮಂದಿಯಲ್ಲಿ ಐದೂ ಮಂದಿ ಗುಜರಾತಿನವರು ಎಂದು ನಾವು ಪತ್ರಿಕೆಗಳಲ್ಲಿ ಓದುವಾಗ ಗುಜರಾತಿನ 1.74 ಅಂಗನವಾಡಿ ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದೆ ಎಂದು ಇನ್ನೊಂದು ವರದಿಯು ಹೇಳುತ್ತದೆ. ರೂ. 3000 ಕೋಟಿ ಖರ್ಚು ಮಾಡಿ ಸರಕಾರವು ಪಟೇಲರ ‘ಏಕತೆಯ ಮೂರ್ತಿ’ಯನ್ನು ಸ್ಥಾಪಿಸುತ್ತದೆ. ಆದರೆ ಗ್ಲೋಬಲ್ ಹಂಗರ್ ಇಂಟರೆಸ್ಟ್‌ನಲ್ಲಿ ಭಾರತವು, ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಶ್ರೀಲಂಕಾಕ್ಕಿಂತ ಕೆಳಗಿನ ಸ್ಥಾನದಲ್ಲಿದೆ. ಈ ಮೇಲಿನ ಅಂಶಗಳನ್ನು ಗಮನಿಸಿದರೆ ಸರಕಾರವು ಸಾರ್ವಜನಿಕ ಹಿತಾಸಕ್ತಿಗಾಗಿ ಏನನ್ನೂ ಮಾಡುತ್ತಿಲ್ಲ ಅನಿಸುತ್ತದೆ ಸರಕಾರವು ಕಾರ್ಪೊರೇಟ್ ಕಂಪೆನಿಗಳ ಲಾಭಕ್ಕಾಗಿ ಸ್ವಾಯತ್ತ ಸಂಸ್ಥೆಗಳ ಸ್ವಾಯತ್ತೆಯನ್ನು ಕಿತ್ತುಕೊಳ್ಳುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ತನ್ನ ‘ದಿ ಪ್ರಾಬ್ಲಮ್ ಆಫ್ ದಿ ರುಪೀ: ಹಿಟ್ಸ್ ಒರಿಜಿನ್ ಆ್ಯಂಡ್ ಇಟ್ಸ್ ಸೆಲ್ಯೂಷನ್’ ಎಂಬ ಪುಸ್ತಕದಲ್ಲಿ ಹಣಕಾಸು ನೀತಿಯ ಮೇಲೆ ಸರಕಾರ ನಿಯಂತ್ರಣ ಇರಬಹುದೆಂಬ ತನ್ನ ಭಯವನ್ನು ವ್ಯಕ್ತಪಡಿಸಿದ್ದರು.

‘‘ನಗದಿನ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರವನ್ನು ಒಂದು ಸರಕಾರಕ್ಕೆ ನೀಡುವುದು ಅಪಾಯಕಾರಿಯಾದರೆ, ಆ ಅಧಿಕಾರವನ್ನು ಭಾರತ ಸರಕಾರಕ್ಕೆ ನೀಡುವುದು ಅತ್ಯಂತ ಅಪಾಯಕಾರಿ’’ ಎಂದಿದ್ದರು ಅವರು.
ಅಂಬೇಡ್ಕರ್ ಹಣಕಾಸು ನೀತಿಯಲ್ಲಿ ಸರಕಾರ ಮಧ್ಯ ಪ್ರವೇಶಿಸುವುದನ್ನು ಅಥವಾ ಅದನ್ನು ನಿಯಂತ್ರಿಸುವುದನ್ನು ವಿರೋಧಿಸಿದ್ದರು.

ಮೊದಲ ಮಹಾಯುದ್ಧದ ವೇಳೆ ಕರೆನ್ಸಿ ಸರ್ಕ್ಯುಲೇಶನ್ ಮೇಲೆ ಬ್ರಿಟಿಷ್ ಸರಕಾರದ ನಿಯಂತ್ರಣ ಕುರಿತು ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆರ್‌ಬಿಐ ಯಾವುದೇ ಹಸ್ತಕ್ಷೇಪವಿರದೆ ಒಂದು ಸಂಪೂರ್ಣ ಸ್ವಾಯತ್ತ ಸಂಸ್ಥೆಯಾಗಿರಬೇಕೇ ಬೇಡವೇ ಎಂಬುದು ಚರ್ಚಾಸ್ಪದ ವಿಷಯ. ಆದರೆ ಅದು ತನ್ನ ಕಾರ್ಯಕ್ಷೇತ್ರದಲ್ಲಿ ಒಂದು ಪ್ರಜಾಸತ್ತಾತ್ಮಕ ಸಂಸ್ಥೆಯಾಗಿರಲೇಬೇಕು. ಪ್ರಧಾನಿ ಮೋದಿಯವರು 2016 ನವೆಂಬರ್ 8ರಂದು ನೋಟು ಅಮಾನ್ಯೀಕರಣವನ್ನು ದಿಢೀರಾಗಿ ಘೋಷಿಸಿದ ಬಳಿಕ, ಸರಕಾರದ ನಿರ್ಧಾರದ ಬಗ್ಗೆ ಸಂಪೂರ್ಣ ಸಹಮತ ವ್ಯಕ್ತಪಡಿಸದ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್‌ರವರ ಅಧಿಕಾರದ ಅವಧಿ ಮುಂದುವರಿಯಲಿಲ್ಲ. ಹಾಲಿ ಗವರ್ನರ್ ಊರ್ಜಿತ್ ಪಟೇಲ್, ಸರಕಾರದ ನಿರ್ಧಾರಗಳಿಗೆ ಸಹಕಾರ ವ್ಯಕ್ತಪಡಿಸುತ್ತಿಲ್ಲವಾದ ಕಾರಣ ಅವರು ಈಗ ಸರಕಾರದ ಗುರಿಯಾಗಿದ್ದಾರೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವ್ಯಕ್ತಪಡಿಸಿದ್ದ ಆತಂಕ, ಭಯ ಈಗ ನಿಜವಾಗಿದೆ. ನಾವೀಗ ಈ ಆತಂಕದಲ್ಲೇ ಬದುಕಬೇಕಾಗಿದೆ.


ಕೃಪೆ: countercurrents.org          

Writer - ರಮಣಿ ಮೋಹನ ಕೃಷ್ಣನ್

contributor

Editor - ರಮಣಿ ಮೋಹನ ಕೃಷ್ಣನ್

contributor

Similar News