ಫ್ರಾನ್ಸ್‌ನ ಕ್ಯಾಲೆಡೋನಿಯಾದಲ್ಲಿ ಸುನಾಮಿ ಭೀತಿ

Update: 2018-12-05 06:07 GMT

ಪ್ಯಾರಿಸ್, ಡಿ.5: ದಕ್ಷಿಣ ಪೆಸಿಫಿಕ್‌ನ ನ್ಯೂ ಕ್ಯಾಲೆಡೋನಿಯಾದ ಪೂರ್ವ ತೀರ ಪ್ರದೇಶದಲ್ಲಿ ಬುಧವಾರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ 7.6ರಷ್ಟು ದಾಖಲಾಗಿದೆ. ಈ ಪ್ರದೇಶದಲ್ಲಿ ಸುನಾಮಿ ಬೀಸುವ ಸಾಧ್ಯತೆಯಿದೆ ಎಂದೂ ಪೆಸಿಫಿಕ್ ಸುನಾಮಿ ವಾರ್ನಿಂಗ್ ಸೆಂಟರ್ ತಿಳಿಸಿದೆ.

ಭೂಕಂಪದ ಅಪಾಯಕಾರಿ ಸುನಾಮಿ ಅಲೆಗಳು ವಾನುವಾಟು ಹಾಗೂ ನ್ಯೂ ಕ್ಯಾಲೆಡೋನಿಯಾದ ಕರಾವಳಿಯಲ್ಲಿ 1,000 ಕಿ.ಮೀ.(600 ಮೈಲು)ವ್ಯಾಪ್ತಿಯಲ್ಲಿ ಬೀಸುವ ಸಾಧ್ಯತೆಯಿದೆ ಎಂದು ಪೆಸಿಫಿಕ್ ಸುನಾಮಿ ವಾರ್ನಿಂಗ್ ಸೆಂಟರ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News