ಆಸ್ಟ್ರೇಲಿಯನ್ ಓಪನ್‌ಗೆ ಸೆರೆನಾ ವಿಲಿಯಮ್ಸ್

Update: 2018-12-05 18:33 GMT

ಮೆಲ್ಬೋರ್ನ್, ಡಿ.5: ಅಮೆರಿಕದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ದಾಖಲೆಯ 24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದು, 2019ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸುವುದಾಗಿ ಟೂರ್ನಿಯ ಸಂಘಟಕರು ಬುಧವಾರ ದೃಢಪಡಿಸಿದ್ದಾರೆ.

2017ರಲ್ಲಿ ಕೊನೆಯ ಬಾರಿ ತನ್ನ ಅಕ್ಕ ವೀನಸ್‌ರನ್ನು ಮಣಿಸಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸೆರೆನಾ, ಆನಂತರ ಮಗುವಿಗೆ ಜನ್ಮ ನೀಡಿದ್ದರಿಂದ ಟೂರ್ನಿಗಳಿಂದ ದೂರವಿದ್ದರು.

 ಕಳೆದ ವಿಂಬಲ್ಡನ್ ಹಾಗೂ ಯುಎಸ್ ಓಪನ್‌ಗಳಲ್ಲಿ ಭಾಗವಹಿಸಿದ್ದ ಅವರು, ಫೈನಲ್‌ವರೆಗೆ ತಲುಪಿದ್ದರು. ಆದರೆ ಪ್ರಶಸ್ತಿ ಗೆಲ್ಲುವಲ್ಲಿ ಎಡವಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News