ಹಿಮಾಚಲದಲ್ಲಿ ಹಿಮಪಾತ; ಚಳಿ ತೀವ್ರ

Update: 2018-12-07 14:11 GMT

ಶಿಮ್ಲ, ಡಿ.7: ಹಿಮಾಚಲ ಪ್ರದೇಶದಲ್ಲಿ ಮತ್ತೆ ಹಿಮಪಾತ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯವು ತೀವ್ರ ಚಳಿಯಿಂದ ತತ್ತರಿಸಿದೆ. ಬುಡಕಟ್ಟು ಪ್ರದೇಶವಾದ ಲಹಾವುಲ್-ಸ್ಪಿಟಿ ಜಿಲ್ಲೆಯಲ್ಲಿ ತಾಪಮಾನ ಮೈನಸ್ 10 ಡಿಗ್ರಿ ಸೆಲ್ಶಿಯಸ್‌ಗೆ ಇಳಿದಿದೆ. ಅಲ್ಲದೆ ಕಿನ್ನೌರ್ ಜಿಲ್ಲೆ ಹಾಗೂ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮನಾಲಿಯಲ್ಲಿ ತಾಪಮಾನ ಶೂನ್ಯಮಟ್ಟಕ್ಕಿಂತ ಕೆಳಗಿಳಿದಿದ್ದು, ಮೈನಸ್ 2.2 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.

ಕಿಲಾಂಗ್ ನಗರದಲ್ಲಿ ಮೈನಸ್ 9.9 ಡಿಗ್ರಿ ಸೆಲ್ಶಿಯಸ್ ತಾಪಮಾನ, ಕಲ್ಪಾದಲ್ಲಿ ಮೈನಸ್ 3.8 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ ಎಂದು ಶಿಮ್ಲ ಹವಾಮಾನ ಇಲಾಖೆಯ ನಿರ್ದೇಶಕ ಮನಮೋಹನ್ ಸಿಂಗ್ ತಿಳಿಸಿದ್ದಾರೆ. ಗುರುವಾರ ರೋಹ್ಟಂಗ್ ಪಾಸ್‌ನಲ್ಲಿ ಸುಮಾರು 10 ಸೆ.ಮೀ., ಕೋಕ್ಸರ್, ಸಿಸು ಮತ್ತು ಗೊಂಡೊಲಾದಲ್ಲಿ 4 ಸೆ.ಮೀ, ಕಲ್ಪದಲ್ಲಿ 3 ಸೆ.ಮೀ. ಹಿಮಪಾತ ಸಂಭವಿಸಿದ್ದು ರೋಹ್ಟಂಗ್ ಪಾಸ್ ಮೂಲಕ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಲಹಾವುಲ್-ಸ್ಪಿಟಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News