ಸಾವಿರಾರು ಮ್ಯಾನ್ಮಾರ್ ಮಹಿಳೆಯರಿಗೆ ಚೀನಾದಲ್ಲಿ ಬಲವಂತದ ಮದುವೆ: ವರದಿ

Update: 2018-12-07 16:16 GMT

ಬ್ಯಾಂಕಾಕ್, ಡಿ. 7: ಉತ್ತರ ಮ್ಯಾನ್ಮಾರ್‌ನ ಸಾವಿರಾರು ಅಸಹಾಯಕ ಮಹಿಳೆಯರನ್ನು ಚೀನಾಕ್ಕೆ ಸಾಗಿಸಿ ಬಲವಂತವಾಗಿ ಮದುವೆ ಮಾಡಿಸಲಾಗುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ.

ಚೀನಾದಲ್ಲಿ ದಶಕಗಳ ಅವಧಿಯ ‘ಒಂದೇ ಮಗು’ ನೀತಿಯಿಂದಾಗಿ ಪುರುಷರಿಗಿಂತ ಸುಮಾರು 3.3 ಲಕ್ಷ ಮಹಿಳೆಯರು ಕಡಿಮೆಯಿದ್ದಾರೆ.

ಈ ಕೊರತೆಯನ್ನು ನೀಗಿಸುವುದಕ್ಕಾಗಿ ಕಾಂಬೋಡಿಯ, ಲಾವೋಸ್, ಮ್ಯಾನ್ಮಾರ್ ಮತ್ತು ವಿಯೆಟ್ನಾಂನ ಸಾವಿರಾರು ಬಡ ಮಹಿಳೆಯರನ್ನು ಪ್ರತಿ ವರ್ಷ ವಧುಗಳಾಗಿ ಮಾರಾಟ ಮಾಡಲಾಗುತ್ತಿದೆ. ಕೆಲವರು ಸ್ವಇಚ್ಛೆಯಿಂದ ಹೋದರೆ, ಇತರರನ್ನು ವಂಚನೆಯಿಂದ ಸಾಗಿಸಲಾಗುತ್ತಿದೆ.

ಮ್ಯಾನ್ಮಾರ್‌ನ ಯುದ್ಧಪೀಡಿತ ಕಚಿನ್ ಮತ್ತು ಉತ್ತರ ಶಾನ್ ರಾಜ್ಯಗಳಲ್ಲಿನ ಸುಮಾರು 7,500 ಮಹಿಳೆಯರನ್ನು ಚೀನಾದಲ್ಲಿ ಬಲವಂತವಾಗಿ ಮದುವೆ ಮಾಡಿಕೊಡಲಾಗಿದೆ ಎಂದು ‘ಜಾನ್ಸ್ ಹಾಪ್‌ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್’ ತನ್ನ ಸಂಶೋಧನಾ ವರದಿಯಲ್ಲಿ ಹೇಳಿದೆ.

‘ಸಂಘರ್ಷ, ನಿರ್ವಸತಿ ಮತ್ತು ಬಡತನ’ದಿಂದಾಗಿ ಮಹಿಳೆಯರು ಮ್ಯಾನ್ಮಾರನ್ನು ತೊರೆಯುತ್ತಿದ್ದಾರೆ ಎಂದು ವರದಿಯ ಲೇಖಕ ಡಬ್ಲು. ಕೋರ್ಟ್‌ಲ್ಯಾಂಡ್ ರಾಬಿನ್ಸನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News