ಇನ್ನು ನಾವು ನಿಮ್ಮ ‘ಬಾಡಿಗೆಯ ಬಂದೂಕು’ ಆಗುವುದಿಲ್ಲ: ಅಮೆರಿಕಕ್ಕೆ ಇಮ್ರಾನ್ ಖಾನ್

Update: 2018-12-07 16:30 GMT

ಇಸ್ಲಾಮಾಬಾದ್, ಡಿ. 7: ಅಮೆರಿಕವು ಪಾಕಿಸ್ತಾನವನ್ನು ದೂರ ತಳ್ಳುತ್ತಿದೆ ಎಂಬುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ ಹಾಗೂ ನನ್ನ ದೇಶವನ್ನು ‘ಬಾಡಿಗೆಯ ಬಂದೂಕಿನಂತೆ’ ಕಾಣುವ ಅಮೆರಿಕದ ಜೊತೆ ಸಂಬಂಧ ಹೊಂದಲು ನಾನು ಯಾವತ್ತೂ ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.

‘‘ಪಾಕಿಸ್ತಾನವನ್ನು ಬಾಡಿಗೆಯ ಬಂದೂಕಿನಂತೆ ಪರಿಗಣಿಸುವ ಸಂಬಂಧವನ್ನು ಹೊಂದಲು ನಾನು ಬಯಸುವುದಿಲ್ಲ. ಇಲ್ಲಿ ಯಾರದೋ ಯುದ್ಧವನ್ನು ಮಾಡಲು ಹಣ ಕೊಡಲಾಗುತ್ತದೆ’’ ಎಂದು ಗುರುವಾರ ‘ವಾಶಿಂಗ್ಟನ್ ಪೋಸ್ಟ್’ಗೆ ನೀಡಿದ ಸಂದರ್ಶನವೊಂದರಲ್ಲಿ ಖಾನ್ ಹೇಳಿದರು.

ಸೋವಿಯತ್ ಒಕ್ಕೂಟದ ವಿರುದ್ಧದ 1980ರ ದಶಕದ ಯುದ್ಧ ಹಾಗೂ ಈಗ ನಡೆಯುತ್ತಿರುವ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಪ್ರಸ್ತಾಪಿಸುತ್ತಾ ಅವರು ಈ ಮಾತುಗಳನ್ನು ಹೇಳಿದ್ದಾರೆ.

‘‘ಇನ್ನು ನಾವು ಯಾವತ್ತೂ ಈ ಪಾತ್ರವನ್ನು ವಹಿಸಿಕೊಳ್ಳುವುದಿಲ್ಲ. ಇದರಿಂದ ನಮಗೆ ಮಾನವ ಜೀವಗಳ ನಷ್ಟ ಮತ್ತು ನಮ್ಮ ಬುಡಕಟ್ಟು ಪ್ರದೇಶಗಳ ನಾಶವಾಗಿರುವುದು ಮಾತ್ರವಲ್ಲದೆ, ನಮ್ಮ ಘನತೆಗೂ ಹಾನಿಯುಂಟಾಗಿದೆ. ಅಮೆರಿಕದೊಂದಿಗೆ ಸರಿಯಾದ ಸಂಬಂಧವನ್ನು ಹೊಂದಲು ನಾವು ಬಯಸುತ್ತೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News