ಅಸಾಂಜ್ ಹೋಗಬಹುದು: ಇಕ್ವೆಡಾರ್ ಅಧ್ಯಕ್ಷ

Update: 2018-12-07 16:36 GMT

ಕ್ವಿಟೊ (ಇಕ್ವೆಡಾರ್), ಡಿ. 7: ಲಂಡನ್‌ನಲ್ಲಿರುವ ತನ್ನ ದೇಶದ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದುಕೊಂಡಿರುವ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರ ನಿರ್ಗಮನಕ್ಕೆ ಅಗತ್ಯವಾದ ಶರತ್ತುಗಳನ್ನು ಪೂರೈಸಲಾಗಿದೆ ಎಂದು ಇಕ್ವೆಡಾರ್ ಅಧ್ಯಕ್ಷ ಲೆನಿನ್ ಮೊರೆನೊ ಗುರುವಾರ ಹೇಳಿದ್ದಾರೆ.

47 ವರ್ಷದ ಆಸ್ಟ್ರೇಲಿಯ ಪ್ರಜೆ ಅಸಾಂಜ್ 6 ವರ್ಷಗಳಿಂದ ರಾಯಭಾರ ಕಚೇರಿಯಲ್ಲಿದ್ದಾರೆ.

‘‘ಸ್ವತಂತ್ರವಾಗಿ ರಾಯಭಾರ ಕಚೇರಿಯನ್ನು ತೊರೆಯುವ ನಿರ್ಧಾರವನ್ನು ತೆಗೆದುಕೊಳ್ಳಲು ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷರು ಹೇಳಿದರು.

ಅವರು ಜಾಮೀನು ಶರತ್ತುಗಳನ್ನು ಉಲ್ಲಂಘನೆ ಮಾಡಿರುವುದಕ್ಕಾಗಿ ನಾನೀಗ ಬ್ರಿಟನ್‌ಗೆ ಉತ್ತರ ನೀಡಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News