ನ್ಯೂಝಿಲ್ಯಾಂಡ್‌ನಲ್ಲಿ ಬ್ರಿಟನ್ ಮಹಿಳೆ ಹತ್ಯೆ: ಪ್ರಧಾನಿ ಕ್ಷಮೆ ಯಾಚನೆ

Update: 2018-12-10 18:37 GMT

ವೆಲಿಂಗ್ಟನ್ (ನ್ಯೂಝಿಲ್ಯಾಂಡ್), ಡಿ. 10: ಸೋಮವಾರ ನ್ಯೂಝಿಲ್ಯಾಂಡ್ ಪ್ರಧಾನಿ ಜಸಿಂಡ ಆರ್ಡರ್ನ್, ತನ್ನ ದೇಶದಲ್ಲಿ ಹತ್ಯೆಗೊಳಗಾದ 22 ವರ್ಷದ ಬ್ರಿಟಿಶ್ ಪ್ರವಾಸಿ ಮಹಿಳೆಯ ಕುಟುಂಬದ ಕ್ಷಮೆ ಕೋರಿದ್ದಾರೆ.

 ನ್ಯೂಝಿಲ್ಯಾಂಡ್ ಪ್ರವಾಸದಲ್ಲಿದ್ದ ಬ್ರಿಟಿಶ್ ಮಹಿಳೆ ಗ್ರೇಸ್ ಮಿಲಾನ್‌ರ ಮೃತದೇಹ ಆಕ್ಲಂಡ್‌ನ ವೇಟಕೇರ್ ಪರ್ವತ ಶ್ರೇಣಿಯ ಪೊದೆಯೊಂದರಲ್ಲಿ ಇತ್ತೀಚೆಗೆ ಪತ್ತೆಯಾಗಿತ್ತು.

ನ್ಯೂಝಿಲ್ಯಾಂಡ್‌ನಲ್ಲಿ ಗಂಭೀರ ಅಪರಾಧಗಳು ಅಪರೂಪವಾಗಿದ್ದು, ಈ ಘಟನೆ ದೇಶವನ್ನು ಆಘಾತಕ್ಕೀಡು ಮಾಡಿದೆ.

‘‘ನ್ಯೂಝಿಲ್ಯಾಂಡ್‌ನ ಪರವಾಗಿ ನಾನು ಗ್ರೇಸ್ ಕುಟುಂಬ ಕ್ಷಮೆ ಕೋರುತ್ತೇನೆ’’ ಎಂದು ಸಂಸತ್ತಿನಲ್ಲಿ ನಡೆದ ವಾರದ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿನೊಂದಿಗೆ ಪ್ರಧಾನಿ ಹೇಳಿದರು.

ಕೊಲೆಗೆ ಸಂಬಂಧಿಸಿ 26 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News