ಗ್ರೀನ್‌ಲ್ಯಾಂಡ್‌ನ ಮಂಜು ಕರಗುವ ವೇಗ ಹೆಚ್ಚಳ: ಅಧ್ಯಯನ

Update: 2018-12-10 18:39 GMT

ಲಂಡನ್, ಡಿ. 10: ಗ್ರೀನ್‌ಲ್ಯಾಂಡ್‌ನ ಮಂಜುಗಡ್ಡೆ ಕರಗುವ ವೇಗ ತೀವ್ರಗೊಂಡಿದೆ ಎಂದು ‘ಅರ್ತ್ ಆ್ಯಂಡ್ ಪ್ಲಾನೆಟರಿ ಸಯನ್ಸ್ ಲೆಟರ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಅಧ್ಯಯನವೊಂದು ತಿಳಿಸಿದೆ.

1992 ಮತ್ತು 2016ರ ನಡುವಿನ ಅವಧಿಯಲ್ಲಿ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ಯುರೋಪಿಯನ್ ರಿಮೋಟ್ ಸೆನ್ಸಿಂಗ್ ಸ್ಯಾಟಲೈಟ್ (ಇಆರ್‌ಎಸ್), ಎನ್ವಿಸ್ಯಾಟ್ ಮತ್ತು ಕ್ರಯೋಸ್ಯಾಟ್ ಉಪಗ್ರಹಗಳಿಂದ ಸಂಗ್ರಹಿಸಿದ ದತ್ತಾಂಶಗಳ ವಿಶ್ಲೇಷಣೆಯ ಆಧಾರದಲ್ಲಿ ಈ ಅಧ್ಯಯನ ಮಾಡಲಾಗಿದೆ.

ಮಂಜುಗಡ್ಡೆಯ ಎತ್ತರವನ್ನು ಈ ಉಪಗ್ರಹಗಳು ಕರಾರುವಕ್ಕಾಗಿ ಅಳತೆ ಮಾಡುತ್ತವೆ. 1990ರ ದಶಕದಲ್ಲಿ ಮಂಜುಗಡ್ಡೆಯ ಎತ್ತರದಲ್ಲಿ ನಗಣ್ಯ ಬದಲಾವಣೆಗಳು ಕಂಡು ಬಂದಿವೆ. ಆದರೆ, 2003ರ ಬಳಿಕ ಮಂಜುಗಡ್ಡೆ ಕರಗುವ ವೇಗದಲ್ಲಿ ಹೆಚ್ಚಳವಾಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News