ಒಮಾನ್: ‘ವಿದೇಶಿಯರಿಗೆ ವೀಸಾ ನಿಷೇಧ’ ವಿಸ್ತರಣೆ

Update: 2018-12-10 18:42 GMT

 ದುಬೈ, ಡಿ. 10: ಈ ವರ್ಷದ ಆದಿ ಭಾಗದಲ್ಲಿ ಜಾರಿಗೆ ತರಲಾಗಿರುವ ‘ವಿದೇಶಿಯರಿಗೆ ವೀಸಾ ನಿಷೇಧ’ವನ್ನು ವಿಸ್ತರಿಸುವ ಬಗ್ಗೆ ಒಮಾನ್ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪರಿಶೀಲಿಸುತ್ತಿದೆ ಎಂದು ‘ಟೈಮ್ಸ್ ಆಫ್ ಒಮಾನ್’ ಪತ್ರಿಕೆ ವರದಿ ಮಾಡಿದೆ.

 ಪ್ರಸಕ್ತ ನಿಷೇಧದ ಅನ್ವಯ, ಮಾಹಿತಿ ವ್ಯವಸ್ಥೆ, ಅಕೌಂಟಿಂಗ್ ಮತ್ತು ಹಣಕಾಸು, ಮಾರಾಟ, ಆಡಳಿತ, ಮಾನವ ಸಂಪನ್ಮೂಲಗಳು ಮತ್ತು ವಿಮೆ ಸೇರಿದಂತೆ 87 ಕ್ಷೇತ್ರಗಳಲ್ಲಿನ ಕೆಲಸಕ್ಕೆ ವಿದೇಶಿಯರನ್ನು ನೇಮಿಸುವುದನ್ನು ನಿಲ್ಲಿಸಲಾಗಿದೆ.

ವಿದೇಶಿಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಕ್ಕೆ ಮುನ್ನ ಕಂಪೆನಿಗಳು ಮಾನವ ಸಂಪನ್ಮೂಲ ಸಚಿವಾಲಯದ ಅನುಮತಿಯನ್ನು ಪಡೆದುಕೊಳ್ಳಬೇಕು ಎಂಬುದಾಗಿ ಸಚಿವಾಲಯವು ಕಳೆದ ವಾರ ಪ್ರಕಟಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News