ಮೊದಲ ಟೆಸ್ಟ್ ನಲ್ಲಿ ವಿಶ್ವ ದಾಖಲೆ : 40 ಆಟಗಾರರಲ್ಲಿ 35 ಮಂದಿ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.........!

Update: 2018-12-11 03:27 GMT

ಆಡಿಲೇಡ್, ಡಿ.11: ಭಾರತಕ್ಕೆ ಸೋಮವಾರ ಐತಿಹಾಸಿಕ ದಿನ. ಆಡಿಲೇಡ್ ನಲ್ಲಿ ಭಾರತ  ಮೊದಲ ಟೆಸ್ಟ್ ನಲ್ಲಿ ಆಥೇಯ ಆಸ್ಟ್ರೇಲಿಯ ವಿರುದ್ಧ 31 ರನ್ ಗಳ  ಜಯ ಗಳಿಸಿತ್ತು. ಸರಣಿಯಲ್ಲಿ 1-0 ಮುನ್ನಡೆಯನ್ನು ಭಾರತ ಸಾಧಿಸಿದೆ.

ಈ ಟೆಸ್ಟ್ ನಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದೆ. ಆಡಿಲೇಡ್ ಟೆಸ್ಟ್ ನಲ್ಲಿ ಮುರಿದಿದೆ. ಔಟಾದ 40 ಆಟಗಾರರ ಪೈಕಿ 35 ಮಂದಿ ಕ್ಯಾಚ್ ಮೂಲಕ ಪೆವಿಲಿಯನ್ ಸೇರಿದ್ದಾರೆ ಎನ್ನುವುದು ವಿಶೇಷ. 

 ಕ್ಯಾಚ್ ಮೂಲಕ 34 ಮಂದಿ ಔಟಾಗಿರುವುದು ಹಿಂದಿನ ದಾಖಲೆ. ಈ ವರ್ಷದ  ಆರಂಭದಲ್ಲಿ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕ ಟೆಸ್ಟ್ ನಲ್ಲಿ ಈ ದಾಖಲೆ ನಿರ್ಮಾಣವಾಗಿತ್ತು. 

ಮೂರನೇ ಹಾಗೂ ನಾಲ್ಕನೇ ಇನಿಂಗ್ಸ್ ನಲ್ಲಿ ಎಲ್ಲರೂ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದ್ದಾರೆ. ಅದರಲ್ಲೂ ಮುಖ್ಯವಾಗಿ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ 11 ಕ್ಯಾಚ್ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News