ಸ್ಟಾರ್ಕ್ ಮೇಲೆ ನಾಯಕ ಟಿಮ್ ಪೈನ್ ಟೀಕಾಸ್ತ್ರ

Update: 2018-12-11 18:46 GMT

ಅಡಿಲೇಡ್, ಡಿ.11: ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸೋಲಿನಿಂದ ಹತಾಶರಾಗಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡದ ನಾಯಕ ಟಿಮ್ ಪೈನ್ ತನ್ನ ತಂಡದ ಹಿರಿಯ ಬೌಲರ್ ಮಿಚೆಲ್ ಸ್ಟಾರ್ಕ್ ಮೇಲೆ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಸ್ಟಾರ್ಕ್ ತನ್ನ ಖ್ಯಾತಿ ಗೆ ತಕ್ಕ ಪ್ರದರ್ಶನ ನೀಡಿಲ್ಲ. ಅವರ ಶ್ರೇಷ್ಠತೆ ಹಾಗೂ ಈಗಿನ ಫಾರ್ಮ್ ನಡುವೆ ಭಾರೀ ಅಂತರವಿದೆ. ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಕ್ಕೆ ರನ್ ಕೊರತೆ ಉಂಟಾಯಿತು. ಇದು ಅಡಿಲೇಡ್‌ನಲ್ಲಿ ಪಂದ್ಯ ಸೋಲಲು ಕಾರಣವಾಗಿದೆ ಎಂದು ಟಿಮ್ ಹೇಳಿದ್ದಾರೆ.

ಆಸ್ಟ್ರೇಲಿಯ ಮೊದಲ ಟೆಸ್ಟ್ ಪಂದ್ಯವನ್ನು 31 ರನ್‌ಗಳಿಂದ ಸೋತಿತ್ತು. ಸೋತ ಹೊರತಾಗಿಯೂ ಟ್ರಾವಿಸ್ ಹೆಡ್, ಶಾನ್ ಮಾರ್ಷ್ ಅರ್ಧಶತಕ ಸಿಡಿಸಿರುವುದು, ನಥಾನ್ ಲಿಯೊನ್ ಆರು ವಿಕೆಟ್ ಗೊಂಚಲು ಪಡೆದಿರುವುದು ಆತಿಥೇಯರಿಗೆ ಧನಾತ್ಮಕ ಅಂಶವಾಗಿದೆ.

‘‘ನಾವು ಸೋಲಲು ಹಲವಾರು ಕಾರಣವಿದೆ. ನಮ್ಮ ತಂಡ ಭಾರತವನ್ನು ಮೊದಲ ದಿನವೇ 200-210 ರನ್‌ಗೆ ಆಲೌಟ್ ಮಾಡಬೇಕಾಗಿತ್ತು. ಆ ನಿಟ್ಟಿನಲ್ಲಿ ನಾವು ಎಡವಿದ್ದೇವೆ. ಮೊದಲ ಇನಿಂಗ್ಸ್‌ನಲ್ಲಿ 230ಕ್ಕೂ ಅಧಿಕ ರನ್ ಗಳಿಸಲು ಬಯಸಿದ್ದೆವು. ಅವರು(ಸ್ಟಾರ್ಕ್)ವಿಶ್ವವನ್ನು ಬೆಚ್ಚಿ ಬೀಳಿಸುವ ಪ್ರದರ್ಶನ ನೀಡಿಲ್ಲ. ಅವರ ಉತ್ತಮ ಹಾಗೂ ಕಳಪೆ ಪ್ರದರ್ಶನಕ್ಕೆ ತುಂಬಾ ಅಂತರವಿದೆ’’ ಎಂದು ಟಿಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News