ಪರ್ತ್ ಪಿಚ್ ಭಾರತಕ್ಕಿಂತ ಆಸ್ಟ್ರೇಲಿಯಕ್ಕೆ ಸೂಕ್ತವಾಗಿದೆ

Update: 2018-12-11 18:59 GMT

ಪರ್ತ್, ಡಿ.11: ಆತಿಥೇಯರು ಶುಕ್ರವಾರ ಪರ್ತ್‌ನ ವಾಕಾ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಲಿದ್ದಾರೆ. ಇಲ್ಲಿನ ಪಿಚ್ ಆಸೀಸ್‌ಗೆ ಹೇಳಿಮಾಡಿಸಿದಂತಿದೆ ಎಂದು ಆಸ್ಟ್ರೇಲಿಯ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

 ಭಾರತ ಅಡಿಲೇಡ್‌ನಲ್ಲಿ ಸೋಮವಾರ ಕೊನೆಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು 31 ರನ್‌ಗಳಿಂದ ಮಣಿಸುವ ಮೂಲಕ 70 ವರ್ಷಗಳ ಬಳಿಕ ಇದೇ ಮೊದಲ ಬಾರಿ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ದಾಖಲಿಸಿದೆ. ‘‘ಹೊಸ ರೂಪ ಪಡೆದಿರುವ ಪರ್ತ್‌ನ ಪಿಚ್ ಭಾರತೀಯ ಆಟಗಾರರಿಗಿಂತ ನಮ್ಮ ಹುಡುಗರಿಗೆ ಹೆಚ್ಚು ಒಪ್ಪುತ್ತದೆ. ಆದರೆ, ನಮ್ಮ ತಂಡ ಆದಷ್ಟು ಬೇಗನೆ ಮೊದಲ ಪಂದ್ಯದ ಸೋಲಿನಿಂದ ಹೊರಬರಬೇಕಾಗಿದೆ’’ ಎಂದು ಪಾಂಟಿಂಗ್ ನುಡಿದರು. ‘‘ಆಸ್ಟ್ರೇಲಿಯ ಮೊದಲ ಪಂದ್ಯದ ಸೋಲಿನಿಂದ ಆದಷ್ಟು ಬೇಗನೆ ಪಾಠ ಕಲಿಯಬೇಕಾಗಿದೆ. ಹೆಚ್ಚಿನ ಆಟಗಾರರು 30 ರನ್‌ಗೆ ತಮ್ಮ ಹೋರಾಟ ಕೊನೆಗೊಳಿಸಿದ್ದರು. ಆಟಗಾರರಿಗೆ ಉತ್ತಮ ಸಾಮರ್ಥ್ಯವಿದೆ’’ ಎಂದು ಪಾಂಟಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News