ಹುವಾವೆ ಅಧಿಕಾರಿಗೆ ಜಾಮೀನು

Update: 2018-12-12 17:28 GMT

ವ್ಯಾಂಕೂವರ್ (ಕೆನಡ), ಡಿ. 12: ಚೀನಾದ ಬೃಹತ್ ತಂತ್ರಜ್ಞಾನ ಕಂಪೆನಿ ಹುವಾವೆಯ ಮುಖ್ಯ ಹಣಕಾಸು ಅಧಿಕಾರಿ ಮೆಂಗ್ ವಾಂಗ್‌ಝೂಗೆ ವ್ಯಾಂಕೂವರ್‌ನ ನ್ಯಾಯಾಲಯವೊಂದು ಮಂಗಳವಾರ ಜಾಮೀನು ನೀಡಿದೆ.

ಅವರನ್ನು ಅಮೆರಿಕಕ್ಕೆ ಗಡಿಪಾರು ಮಾಡುವುದಕ್ಕೆ ಸಂಬಂಧಿಸಿದ ಮೊಕದ್ದಮೆ ಈಗ ನಡೆಯುತ್ತಿದೆ.

ಇರಾನ್ ವಿರುದ್ಧ ಅಮೆರಿಕ ವಿಧಿಸಿರುವ ಆರ್ಥಿಕ ದಿಗ್ಬಂಧನವನ್ನು ಉಲ್ಲಂಘಿಸಿ ಇರಾನ್ ಜೊತೆಗೆ ವ್ಯವಹಾರ ಮಾಡಲು ಪ್ರಯತ್ನಿಸುತ್ತಿದ್ದ ಸಂಸ್ಥೆಯೊಂದಿಗೆ ಮೆಂಗ್ ನಂಟು ಹೊಂದಿದ್ದಾರೆ ಎಂಬ ಆರೋಪವನ್ನು ಅಮೆರಿಕ ಅವರ ಮೇಲೆ ಹೊರಿಸಿದೆ. ಅಮೆರಿಕದ ಕೋರಿಕೆಯಂತೆ ಕೆನಡ ಮೆಂಗ್‌ರನ್ನು ಡಿಸೆಂಬರ್ 1ರಂದು ವ್ಯಾಂಕೂವರ್ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.

ಅಮೆರಿಕ-ಚೀನಾ ವ್ಯಾಪಾರ ಸಮರದಲ್ಲಿ ಮೇಲುಗೈ ಸಾಧಿಸಲು ಅಮೆರಿಕ ನಡೆಸಿದ ಪಿತೂರಿ ಎಂಬುದಾಗಿ ಚೀನಾ ಭಾವಿಸಿದೆ ಹಾಗೂ ಅವರನ್ನು ಬಿಡುಗಡೆ ಮಾಡದಿದ್ದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಚೀನಾ ಕೆನಡಕ್ಕೆ ಎಚ್ಚರಿಕೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News