ದುಬೈಯಲ್ಲಿ ಚಲಿಸುವ ಪೆಟ್ರೋಲ್ ಪಂಪ್

Update: 2018-12-12 17:42 GMT

ದುಬೈ, ಡಿ. 12: ಹೆಚ್ಚು ಶ್ರಮವಿಲ್ಲದೆ ಬೇರೆ ಸ್ಥಳಗಳಿಗೆ ಸ್ಥಳಾಂತರಿಸಬಲ್ಲ ಪೆಟ್ರೋಲ್ ಪಂಪೊಂದನ್ನು ಯುಎಇಯ ನಗರ ದುಬೈಯಲ್ಲಿ ಸ್ಥಾಪಿಸಲಾಗಿದೆ.

ಮೂರು ಚಲಿಸುವ ಪೆಟ್ರೋಲ್ ಪಂಪ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದು ಸರಣಿಯಲ್ಲಿ ಮೊದಲನೆಯದಾಗಿದೆ.

ಇದೀಗ ಪ್ರಾಯೋಗಿಕ ಹಂತದಲ್ಲಿದ್ದು, ಅರೇಬಿಯನ್ ರ್ಯಾಂಚಸ್ ಸಮುದಾಯದಲ್ಲಿ ಸ್ಥಾಪಿಸಲಾಗಿದೆ.

ಇದರ ಎರಡು ಪಂಪ್‌ಗಳು ನೆಲದಲ್ಲಿವೆ ಹಾಗೂ ಇಂಧನ ಟ್ಯಾಂಕ್ ನೆಲದಿಂದ ಮೇಲಿದೆ. ಅಗತ್ಯ ಬಿದ್ದರೆ, ಇದನ್ನು 30 ದಿನಗಳಲ್ಲಿ ಬಿಚ್ಚಿ ಇನ್ನೊಂದು ಸ್ಥಳಕ್ಕೆ ಒಯ್ಯಬಹುದಾಗಿದೆ.

ಅದರಲ್ಲಿ 30,000 ಲೀಟರ್ ಇಂಧನವನ್ನು ಸಂಗ್ರಹಿಸಿಡಬಹುದಾಗಿದೆ ಹಾಗೂ ದಿನಕ್ಕೆ 400 ಕಾರುಗಳಿಗೆ ಇಂಧನ ತುಂಬಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News