×
Ad

ಕಲಾಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡ: ಅಪಾರ ನಷ್ಟ

Update: 2018-12-13 19:09 IST

ಬೆಂಗಳೂರು, ಡಿ.13: ನಗರದ ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದ ಆಡಿಟೋರಿಯಂನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ.ಗಳ ಬೆಲೆ ಬಾಳುವ ಕಲಾತ್ಮಕ ವಸ್ತುಗಳು, ಪೀಠೋಪಕರಣಗಳು ಸೇರಿದಂತೆ ಮೌಲ್ಯಯುತವಾದ ವಸ್ತುಗಳು ಸುಟ್ಟುಹೋಗಿವೆ.

ಕಲಾಗ್ರಾಮದ ಆಡಿಟೋರಿಯಂನಲ್ಲಿ ಇಂದು ಬೆಳಗ್ಗೆ 5:30 ರ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಸೌಂಡ್ ಸಿಸ್ಟಂ, ಕುರ್ಚಿಗಳು ಮತ್ತು ಲೈಟ್‌ರೂಂನ ಸಾಮಗ್ರಿಗಳು ಪೂರ್ಣ ಸುಟ್ಟು ದಟ್ಟ ಹೊಗೆ ಹೊರಬರಲಾರಂಭಿಸಿತ್ತು. ಈ ವೇಳೆ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು 3 ಗಂಟೆಗಳ ಕಾಲ ಶ್ರಮಿಸಿ ಬೆಂಕಿ ನಂದಿಸಿದರಾದರೂ ಅವಘಡದಿಂದ ಸುಮಾರು 40 ಲಕ್ಷ ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ತಿಳಿದುಬಂದಿದೆ.

ಆಡಿಟೋರಿಯಂನಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ಆಡಿಟೋರಿಯಂ ಇದಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News