ಆನ್‌ಲೈನ್ ಔಷಧಗಳ ಮಾರಾಟಕ್ಕೆ ನಿಷೇಧ: ಎಫ್‌ಕೆಸಿಸಿಐ ಸ್ವಾಗತ

Update: 2018-12-13 15:38 GMT

ಬೆಂಗಳೂರು, ಡಿ.13: ಆನ್‌ಲೈನ್ ಔಷದಗಳ ಮಾರಾಟವನ್ನು ದೇಶದಾದ್ಯಂತ ನಿಷೇಧ ಮಾಡಿರುವ ದಿಲ್ಲಿ ಹೈಕೋರ್ಟ್‌ನ ತೀರ್ಪನ್ನು ಎಫ್‌ಕೆಸಿಸಿಐ ಸ್ವಾಗತಿಸಿದೆ.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕೇಂದ್ರದ ಆರೋಗ್ಯ ಮಂತ್ರಾಲಯವು 328 ಎಫ್‌ಡಿಸಿ ಔಷಧಗಳ ಉತ್ಪಾದನೆ, ಮಾರಾಟ ಮತ್ತು ಹಂಚಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಭಾರತದ ಆರ್ಥಿಕತೆಯು ಪ್ರಪಂಚದಲ್ಲಿಯೇ ಮಾನವ ಸಂಪನ್ಮೂಲದ ಮೇಲೆ ಅವಲಂಬಿಸಿದೆ. ಭಾರತವು 2ನೇ ಅತಿದೊಡ್ಡ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದ್ದು, ಅದರಲ್ಲಿ ಶೇ.15ಕ್ಕಿಂತ ಹೆಚ್ಚು ಸುಮಾರು 19 ಕೋಟಿ ಜನರು 25ರ ವಯಸ್ಸಿನ ಒಳಗಿನವರು ಇದ್ದಾರೆ.

ಆನ್‌ಲೈನ್ ಟ್ರೇಡಿಂಗ್‌ನಿಂದ ಉದ್ಯೋಗಾವಕಾಶಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ. ಅಲ್ಲದೆ, ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ. ಹೀಗಾಗಿ, ದೇಶದ ಎಲ್ಲ ವ್ಯಾಪಾರಿ ಕ್ಷೇತ್ರಗಳಿಗೂ ಆನ್‌ಲೈನ್ ಮಾರಾಟದ ನಿಷೇಧ ಹೇರಬೇಕು ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಪ್ರಕಟನೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News