ವಿಜಯ ಮಲ್ಯರನ್ನು ‘ಕಳ್ಳ’ ಎಂದು ಕರೆಯುವುದು ಸರಿಯಲ್ಲ: ಕೇಂದ್ರ ಸಚಿವ ಗಡ್ಕರಿ

Update: 2018-12-14 06:53 GMT

ಹೊಸದಿಲ್ಲಿ, ಡಿ.14: ಸುಮಾರು 40 ವರ್ಷಗಳ ಕಾಲ ಸಾಲವನ್ನು ಮರುಪಾವತಿಸಿರುವ ವ್ಯಕ್ತಿಯೊಬ್ಬನನ್ನು ‘ಕಳ್ಳ’ ಎಂದು ಕರೆಯುವುದು ‘ಸರಿಯಲ್ಲ’ ಎಂದು ಇಂಗ್ಲೆಂಡ್ ನ್ಯಾಯಾಲಯದಿಂದ ಗಡಿಪಾರು ಆದೇಶ ಪಡೆದಿರುವ ಭಾರತದ ಉದ್ಯಮಿ ವಿಜಯ್ ಮಲ್ಯ ಪರ ಕೇಂದ್ರ ಸಚಿವ ನಿತಿನ್ ಗಡ್ಕರಿ ಬ್ಯಾಟಿಂಗ್ ಮಾಡಿದ್ದಾರೆ.

 ‘‘ನನಗೆ ವಿಜಯ ಮಲ್ಯರೊಂದಿಗೆ ಏನೂ ಕೊಡು-ಕೊಳ್ಳುವಿಕೆಯಿಲ್ಲ... ಮಲ್ಯ 40 ವರ್ಷಗಳ ಕಾಲ ಸಾಲವನ್ನು ಮರು ಪಾವತಿ ಮಾಡಿದ್ದಾರೆ. ವಿಮಾನಯಾನ ಕ್ಷೇತ್ರಕ್ಕೆ ಪ್ರವೇಶಿಸಿದ ಬಳಿಕ ಸಮಸ್ಯೆಗೆ ಸಿಲುಕಿದ್ದಾರೆ. ಹಾಗಂತ ಅವರನ್ನು ಕಳ್ಳ ಎಂದು ಕರೆಯಲು ಸಾಧ್ಯವಾಗುತ್ತದಾ?, ಒಂದು ಬಾರಿ ಸಾಲ ಮರು ಪಾವತಿಸಿಲ್ಲ ಎಂಬ ಕಾರಣಕ್ಕೆ ಅವರು ಮೋಸಗಾರನಾಗುತ್ತಾರಾ? ಇಂತಹ ಮನಸ್ಥಿತಿ ಸರಿಯಲ್ಲ’’ ಎಂದು ಮುಂಬೈನಲ್ಲಿ ಟೈಮ್ಸ್ ನೆಟ್‌ವರ್ಕ್ ಏರ್ಪಡಿಸಿದ್ದ ಭಾರತೀಯ ಆರ್ಥಿಕ ಸಮಾವೇಶದಲ್ಲಿ ಕೇಂದ್ರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News