ಎರಡನೇ ಟೆಸ್ಟ್:ಭಾರತಕ್ಕೆ ಕೊಹ್ಲಿ-ರಹಾನೆ ಆಸರೆ

Update: 2018-12-15 09:34 GMT

ಪರ್ತ್, ಡಿ.15: ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಸಾಹಸದ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 63 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿದೆ.

ಆಸ್ಟ್ರೇಲಿಯವನ್ನು ಮೊದಲ ಇನಿಂಗ್ಸ್‌ನಲ್ಲಿ 326 ರನ್‌ಗೆ ನಿಯಂತ್ರಿಸಿದ ಭಾರತ ಮೊದಲ ಇನಿಂಗ್ಸ್ ಆರಂಭಿಸಿತು. 8 ರನ್‌ಗೆ 2 ವಿಕೆಟ್‌ಗಳನ್ನು ಕಳೆದುಕೊಂಡ ಭಾರತ ಅತ್ಯಂತ ಕಳಪೆ ಆರಂಭ ಪಡೆಯಿತು. ಕೆಎಲ್ ರಾಹುಲ್ 2 ರನ್ ಗಳಿಸಿದರೆ, ವಿಜಯ್ ಖಾತೆ ತೆರೆಯಲೂ ವಿಫಲರಾದರು.

ಆಗ ತಂಡಕ್ಕೆ ಆಸರೆಯಾದವರು ನಾಯಕ ವಿರಾಟ್ ಕೊಹ್ಲಿ. ಅರ್ಧಶತಕ ಸಿಡಿಸಿದ ಕೊಹ್ಲಿ(69,167 ಎಸೆತ, 8 ಬೌಂಡರಿ)ಚೇತೇಶ್ವರ ಪೂಜಾರ(24) ಅವರೊಂದಿಗೆ 3ನೇ ವಿಕೆಟ್‌ಗೆ 74 ರನ್ ಸೇರಿಸಿ ತಂಡದ ಇನಿಂಗ್ಸ್ ರಿಪೇರಿ ಮಾಡಿದರು. ಪೂಜಾರ ಔಟಾದ ಬಳಿಕ ಉಪ ನಾಯಕ ಅಜಿಂಕ್ಯ ರಹಾನೆ(39) ಅವರೊಂದಿಗೆ 4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 66 ರನ್ ಜೊತೆಯಾಟ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News