ಭಾರತಕ್ಕೆ ಶರಣಾದ ಪಾಕಿಸ್ತಾನ

Update: 2018-12-15 18:47 GMT

1897: ಅಂತರ್ದಹನಕಾರಿ ಇಂಜಿನ್ ಸೌಲಭ್ಯ ಹೊಂದಿದ್ದ ಪ್ರಥಮ ಸಬ್ ಮರೀನ್ ಇಂದು ಅಮೆರಿಕದಲ್ಲಿ ರಚನೆಗೊಂಡಿತು.

1920: ಚೀನಾದ ಗನ್ಸು ಪ್ರಾಂತದಲ್ಲಿ 8.5 ಕಂಪನಾಂಕದ ತೀವ್ರತೆಯಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಸುಮಾರು 2,00,000 ಜನ ಬಲಿಯಾದ ವರದಿಯಾಗಿದೆ.

1941: ಎರಡನೇ ವಿಶ್ವ ಮಹಾಯುದ್ಧದ ಭಾಗವಾಗಿ ಜಪಾನ್ ಸೈನ್ಯವು ಮಲೇಶ್ಯದ ಸರವಾಕ್ ಪ್ರಾಂತವನ್ನು ವಶಪಡಿಸಿಕೊಂಡಿತು.

1958: ಕೊಲಂಬಿಯಾದ ಬಗೋಟಾದಲ್ಲಿ ಗೋದಾಮು ಒಂದಕ್ಕೆ ಬೆಂಕಿ ಬಿದ್ದು 82 ಜನ ಸಾವಿಗೀಡಾದರು.

1962: ನೇಪಾಳವು ಇಂದು ಸಂವಿಧಾನವನ್ನು ಅಂಗೀಕರಿಸಿತು.

1971: ಬಾಂಗ್ಲಾದೇಶದ ವಿಮೋಚನೆಗಾಗಿ ಭಾರತ ಹಾಗೂ ಪಾಕಿಸ್ತಾನಗಳ ಮಧ್ಯೆ ನಡೆದ ಯುದ್ಧ ಭಾರತದ ವಿಜಯದೊಂದಿಗೆ ಇಂದು ಕೊನೆಗೊಂಡಿತು.

1971ರ ಡಿ.3ರಿಂದ ಆರಂಭವಾಗಿದ್ದ ಈ ಯುದ್ಧದಲ್ಲಿ ಭಾರತದ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಹಾಗೂ ಪಾಕಿಸ್ತಾನದ ಲೆ.ಜ ನಿಯಾಝಿ ಡಿ.16ರಂದು ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಪಾಕಿಸ್ತಾನವು ಭಾರತಕ್ಕೆ ಶರಣಾಯಿತು. ಅಂದಿನ ಪ್ರಧಾನಿ ಇಂದಿರಾಗಾಂಧಿ ಅಧಿಕೃತವಾಗಿ ಜಯದ ಘೋಷಣೆ ಹೊರಡಿಸಿದರು.

1991: ಕಝಕಿಸ್ತಾನ್‌ವು ಇಂದು ಸ್ವತಂತ್ರವಾಯಿತು.

2014: ಪಾಕಿಸ್ತಾನದ ಸೈನಿಕ ಶಾಲೆಯ ಮೇಲೆ ಉಗ್ರಗಾಮಿಗಳು ದಾಳಿ ಮಾಡಿದರು. ಈ ದಾಳಿಯಲ್ಲಿ ಸುಮಾರು 145 ಜನ ಸಾವಿಗೀಡಾದರು.

2016: ವ್ಯಾಪಕ ಪರಿಸರ ಮಾಲಿನ್ಯ ಸಂಬಂಧ ಬೀಜಿಂಗ್ ಸೇರಿದಂತೆ ಚೀನಾದ 22 ನಗರಗಳಲ್ಲಿ 5 ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಯಿತು.

2004: ಮರಾಠಿ ಸಿನೆಮಾ ನಟ ಲಕ್ಷ್ಮೀಕಾಂತ್ ಬರ್ಡೆ ಇಂದು ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ