ಐಪಿಎಲ್ ಆಟಗಾರರ ಹರಾಜು: ಜೈದೇವ್, ಮೋಹಿತ್, ಶಮಿಗೆ ಜಾಕ್‌ಪಾಟ್

Update: 2018-12-18 12:11 GMT
ಜೈದೇವ್ ಉನದ್ಕಟ್

ಜೈಪುರ, ಡಿ.18: ಭಾರತದ ಆಟಗಾರರಾದ ಜೈದೇವ್ ಉನದ್ಕಟ್ , ಮೋಹಿತ್ ಶರ್ಮಾ ಹಾಗೂ ಮುಹಮ್ಮದ್ ಶಮಿಗೆ ಮಂಗಳವಾರ ಇಲ್ಲಿ 2019ರ ಐಪಿಎಲ್‌ಗಾಗಿ ನಡೆದ ಆಟಗಾರರ ಹರಾಜಿನಲ್ಲಿ ಜಾಕ್‌ಪಾಟ್ ಹೊಡೆದಿದೆ.

1.5 ಕೋ.ರೂ. ಮೂಲಬೆಲೆ ಹೊಂದಿದ್ದ ವೇಗದ ಬೌಲರ್ ಜೈದೇವ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ 8.4 ಕೋ.ರೂ.ಗೆ ಹರಾಜಾಗಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು.

ಮೋಹಿತ್ ಶರ್ಮಾ(ಮೂಲ ಬೆಲೆ 50 ಲಕ್ಷ)ಚೆನ್ನೈ ಸೂಪರ್ ಕಿಂಗ್ಸ್‌ಗೆ 5 ಕೋ.ರೂ.ಗೆ ಹಾಗೂ ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ(1 ಕೋ.ರೂ.ಮೂಲಬೆಲೆ)ಪಂಜಾಬ್ ಫ್ರಾಂಚೈಸಿಗೆ 4.8 ಕೋ.ರೂ.ಗೆ ಬಿಕರಿಯಾದರು.

ಇನ್ನುಳಿದಂತೆ ಲಸಿತ್ ಮಾಲಿಂಗ ಹಾಗೂ ಇಶಾಂತ್ ಶರ್ಮಾ ಕ್ರಮವಾಗಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ತಂಡಗಳಿಗೆ 2 ಕೋ.ರೂ. ಹಾಗೂ 1.1 ಕೋ.ರೂ.ಗೆ ಮಾರಾಟವಾದರು.

ವಿಂಡೀಸ್ ಆಲ್‌ರೌಂಡರ್ ಬ್ರಾತ್‌ವೇಟ್ ಹಾಗೂ ಭಾರತದ ಆಲ್‌ರೌಂಡರ್ ಅಕ್ಷರ್ ಪಟೇಲ್ ತಲಾ 5 ಕೋ.ರೂ. ಗೆ ದಿಲ್ಲಿ ಕ್ಯಾಪಿಟಲ್ ಹಾಗೂ ಕೆಕೆಆರ್ ತಂಡದ ಪಾಲಾದರು.

ಕಳೆದ ಬಾರಿ ಆರ್‌ಸಿಬಿ ತಂಡದಲ್ಲಿ ಆಡಿದ್ದ ಸರ್ಫರಾಝ್ ಖಾನ್ ಈ ವರ್ಷ 25 ಲಕ್ಷ ರೂ.ಗೆ ಪಂಜಾಬ್ ತಂಡದ ಪಾಲಾದರು.

ಹರಾಜು ಪ್ರಕ್ರಿಯೆ ಮುಂದುವರಿದಿದ್ದು, ಭಾರತದ ಆಲ್‌ರೌಂಡರ್ ಯುವರಾಜ್ ಸಿಂಗ್ ಮಾರಾಟವಾಗದೇ ಉಳಿದಿರುವ ಪ್ರಮುಖ ಆಟಗಾರನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News