ಶೇ.99 ವಸ್ತುಗಳನ್ನು 18% ಜಿಎಸ್‌ಟಿ ವ್ಯಾಪ್ತಿಗೆ ತರಲು ಪ್ರಯತ್ನಿಸಲಾಗುತ್ತಿದೆ: ಪ್ರಧಾನಿ ಮೋದಿ

Update: 2018-12-18 15:38 GMT

ಮುಂಬೈ,ಡಿ.18: ಸರಕು ಮತ್ತು ಸೇವಾ ತೆರಿಗೆಯನ್ನು ಇನ್ನಷ್ಟು ಸರಳಗೊಳಿಸಲಾಗುವ ಬಗ್ಗೆ ಸುಳಿವು ನೀಡಿರುವ ಪ್ರಧಾನಿ ಮೋದಿ, ಶೇ. 99 ರಷ್ಟು ವಸ್ತುಗಳನ್ನು 18% ಜಿಎಸ್‌ಟಿ ವ್ಯಾಪ್ತಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಮಂಗಳವಾರ ತಿಳಿಸಿದ್ದಾರೆ.

ಇಂದು ಜಿಎಸ್‌ಟಿ ವ್ಯವಸ್ಥೆಯು ಬಹುತೇಕವಾಗಿ ಅನುಷ್ಟಾನಗೊಂಡಿದೆ ಮತ್ತು ಶೇ.99 ವಸ್ತುಗಳನ್ನು 18% ಜಿಎಸ್‌ಟಿ ವ್ಯಾಪ್ತಿಯಡಿ ಬರುವಂತೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪ್ರಧಾನಿ ತಿಳಿಸಿದ್ದಾರೆ. ಇದರೊಂದಿಗೆ ಶೇ.28ರ ಜಿಎಸ್‌ಟಿ ಮಟ್ಟವನ್ನು ಕೇವಲ ಐಷಾರಾಮಿ ವಸ್ತುಗಳಂಥ ಕೆಲವೇ ಉತ್ಪನ್ನಗಳಿಗೆ ಸೀಮಿತಗೊಳಿಸುವ ಸೂಚನೆಯನ್ನು ಮೋದಿ ನೀಡಿದ್ದಾರೆ. ಜಿಎಸ್‌ಟಿ ರೂಪಿಸುವ ಸಂದರ್ಭದಲ್ಲಿ ಆಯಾ ರಾಜ್ಯಗಳಲ್ಲಿ ಅಂದು ಜಾರಿಯಲ್ಲಿದ್ದ ವ್ಯಾಟ್ ಅಥವಾ ಅಬಕಾರಿ ತೆರಿಗೆಗೆ ಅನುಗುಣವಾಗಿ ರೂಪಿಸಲಾಗಿತ್ತು. ಈಗ ಹಲವು ಬಾರಿ ಸಭೆ, ಚರ್ಚೆಗಳು ನಡೆದ ನಂತರ ಈ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.

ದಶಕಗಳಿಂದಲೂ ದೇಶ ಜಿಎಸ್‌ಟಿಗೆ ಬೇಡಿಕೆ ಇಟ್ಟಿತ್ತು. ನೂತನ ತೆರಿಗೆ ವ್ಯವಸ್ಥೆಯ ಜಾರಿಯಿಂದ ವ್ಯಾಪಾರ ಮಾರುಕಟ್ಟೆಯಲ್ಲಿದ್ದ ತಡೆಗಳನ್ನ್ನು ತೊಡೆದು ಹಾಕಲಾಗಿದೆ ಮತ್ತು ವ್ಯವಸ್ಥೆಯ ಸಾಮರ್ಥ್ಯ ಸುಧಾರಣೆಯಾಗುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News