ಐಸಿಸ್ ಭಯೋತ್ಪಾದಕರು ದುರ್ಬಲಗೊಂಡಿದ್ದಾರೆ, ನಿರ್ಮೂಲಗೊಂಡಿಲ್ಲ: ಫ್ರಾನ್ಸ್

Update: 2018-12-20 14:07 GMT

ಪ್ಯಾರಿಸ್, ಡಿ. 20: ಐಸಿಸ್ ಭಯೋತ್ಪಾದಕರು ದುರ್ಬಲಗೊಂಡಿದ್ದಾರೆ, ಆದರೆ ಸಿರಿಯದ ನಕಾಶೆಯಿಂದ ಅವರು ನಿರ್ಮೂಲಗೊಂಡಿಲ್ಲ ಎಂದು ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಗುರುವಾರ ಹೇಳಿದ್ದಾರೆ.

ಅವರ ಉಳಿದ ಭದ್ರಕೋಟೆಗಳಲ್ಲಿ ಅವರನ್ನು ನಿರ್ಣಾಯಕವಾಗಿ ಸೋಲಿಸುವ ಯುದ್ಧವನ್ನು ಮುಂದುವರಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘‘ಇಸ್ಲಾಮಿಕ್ ಸ್ಟೇಟ್ (ಐಸಿಸ್) ಈಗ ಹಿಂದೆಂದಿಗಿಂತಲೂ ಹೆಚ್ಚು ದುರ್ಬಲವಾಗಿದೆ’’ ಎಂದು ಫ್ಲಾರೆನ್ಸ್ ಟ್ವಿಟರ್‌ನಲ್ಲಿ ಹೇಳಿದರು.

ಐಸಿಸ್ ಭಯೋತ್ಪಾದಕ ಗುಂಪನ್ನು ಸೋಲಿಸಲಾಗಿದೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಮಾಡಿರುವ ಘೋಷಣೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

‘‘ಆದರೆ, ಐಸಿಸನ್ನು ಅದರ ಬೇರು ಸಮೇತ ಕಿತ್ತೊಗೆಯಲಾಗಿಲ್ಲ. ಈ ಭಯೋತ್ಪಾದಕ ಸಂಘಟನೆಯ ಕೊನೆಯ ಕೋಟೆಗಳನ್ನು ಸೇನಾ ಕಾರ್ಯಾಚರಣೆಯ ಮೂಲಕ ನಿರ್ಣಾಯಕವಾಗಿ ಸೋಲಿಸುವುದು ಅಗತ್ಯವಾಗಿದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News