ಟ್ರಂಪ್ ನಿರ್ಧಾರ ವಿರೋಧಿಸಿ ಅಮೆರಿಕ ರಕ್ಷಣಾ ಕಾರ್ಯದರ್ಶಿ ರಾಜೀನಾಮೆ

Update: 2018-12-21 04:40 GMT

ವಾಷಿಂಗ್ಟನ್, ಡಿ. 21: ಸಿರಿಯಾದಿಂದ ಸೇನೆಯನ್ನು ವಾಪಾಸು ಪಡೆಯುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಅವರ ದಿಢೀರ್ ನಿರ್ಧಾರಕ್ಕೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಅಧ್ಯಕ್ಷರ ನಿರ್ಧಾರವನ್ನು ವಿರೋಧಿಸಿ ಅಮೆರಿಕ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟೀಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಸಿರಿಯಾದಲ್ಲಿ 2000 ಮಂದಿ ಸೈನಿಕರಿರುವ ಬೃಹತ್ ಪಡೆಯನ್ನು ವಾಪಾಸು ಕರೆಸಿಕೊಳ್ಳುವ ನಿರ್ಧಾರವನ್ನು ಟ್ರಂಪ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. "ಇಸ್ಲಾಮಿಕ್ ಸ್ಟೇಟ್ ಹೋರಾಟವನ್ನು ಈಗಾಗಲೇ ಮಟ್ಟಹಾಕಲಾಗಿದ್ದು, ಮಧ್ಯಪ್ರಾಚ್ಯ ದೇಶಗಳ ಪೊಲೀಸ್ ಆಗಿ ಮುಂದುವರಿಯಲು ಅಮೆರಿಕ ಬಯಸುವುದಿಲ್ಲ" ಎಂದು ಹೇಳಿದ್ದಾರೆ.

ಆದರೆ ಟ್ರಂಪ್ ಜತೆಗಿನ ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಡಿಸಿದ ನಿವೃತ್ತ ಜನರಲ್ ಮ್ಯಾಟಿಸ್ ಅವರು, "ನಿಮ್ಮ ಅಭಿಪ್ರಾಯಕ್ಕೆ ಹೊಂದಿಕೆಯಾಗುವ ಅಭಿಪ್ರಾಯ ಹೊಂದಿದ ರಕ್ಷಣಾ ಕಾರ್ಯದರ್ಶಿಯನ್ನು ಹೊಂದುವ ಸಂಪೂರ್ಣ ಅಧಿಕಾರ ನಿಮಗಿದೆ. ಆದ್ದರಿಂದ ನನ್ನ ಹುದ್ದೆಯಿಂದ ಪದತ್ಯಾಗ ಮಾಡುವುದು ಸರಿ ಎನ್ನುವುದು ನನ್ನ ನಂಬಿಕೆ" ಎಂದು ಸ್ಪಷ್ಟಪಡಿಸಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಚಳವಳಿಯನ್ನು ಸೋಲಿಸಲು ಅಂತರರಾಷ್ಟ್ರೀಯ ಮೈತ್ರಿಗೆ ಕರೆ ನೀಡಿರುವ ಅವರು, ನ್ಯಾಟೊ ಮಿಲಿಟರಿ ಮೈತ್ರಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ಆದರೆ ಇದಕ್ಕೆ ತಗುಲುವ ವೆಚ್ಚದ ಹಿನ್ನೆಲೆಯಲ್ಲಿ ಅಧ್ಯಕ್ಷ ಟ್ರಂಪ್ ಸೇನೆ ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News