ರಸ್ತೆಯಿಂದ ಹಾರಿ ಸುರಂಗದ ಮೇಲ್ಭಾಗಕ್ಕೆ ಢಿಕ್ಕಿ ಹೊಡೆದ ಬಿಎಂಡಬ್ಲ್ಯು ಕಾರು: ವಿಡಿಯೋ ವೈರಲ್

Update: 2018-12-22 16:50 GMT

ಬ್ರಾಟಿಸ್ಲಾವಿಯಾ, ಡಿ.22: ಸ್ಲೊವಾಕಿಯಾದಲ್ಲಿ ನಡೆದ ವಿಲಕ್ಷಣ ಕಾರು ಅಪಘಾತವೊಂದರಲ್ಲಿ ಬಿಎಂಡಬ್ಲ್ಯು ಕಾರೊಂದು ರಸ್ತೆಯಿಂದ ಹಾರಿ ಸುರಂಗವೊಂದರ ಮೇಲ್ಭಾಗಕ್ಕೆ ತಾಗಿ ನಂತರ 360 ಡಿಗ್ರಿ ಗಿರಕಿ ಹೊಡೆದು ಕೊನೆಗೆ ನಿಂತು ಬಿಟ್ಟಿದೆ. ಈ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಕಾರಿನ 44 ವರ್ಷದ ಚಾಲಕ ಈ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾನೆಂದು ಸ್ಥಳೀಯ ಪೊಲೀಸರು ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಹೇಳಿದ್ದಾರೆ.

ಈಶಾನ್ಯ ಸ್ಲೊವಾಕಿಯಾದ ಬೋರಿಕ್ ಸುರಂಗದ ಸಮೀಪ ಈ ಅಪಘಾತ ನಡೆದಿದ್ದು, ಕಾರಿನಲ್ಲಿ ಚಾಲಕನೊಬ್ಬನೇ ಇದ್ದ. ಆತ ಮದ್ಯ ಸೇವಿಸಿಲ್ಲ ಎಂದು ತನಿಖೆಯ ವೇಳೆ ದೃಢ ಪಟ್ಟಿದ್ದು, ಆತ ನಿದ್ದೆಗೆ ಜಾರಿದ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಈ ಘಟನೆಯ ವೀಡಿಯೋವನ್ನು 20 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು ಹಾನಿಗೊಂಡ ಬಿಎಂಡಬ್ಲ್ಯು ಕಾರಿನ ಎರಡು ಫೋಟೋಗಳನ್ನೂ ಪೊಲೀಸರು ಪೋಸ್ಟ್ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News