ಭಾರತಕ್ಕೆ ನಿಮ್ಮಿಂದ ಉಪದೇಶ ಬೇಕಾಗಿಲ್ಲ: ಪಾಕ್ ಪ್ರಧಾನಿಗೆ ಮುಹಮ್ಮದ್ ಕೈಫ್ ತರಾಟೆ

Update: 2018-12-25 10:37 GMT

ಹೊಸದಿಲ್ಲಿ, ಡಿ.25: ದೇಶದಲ್ಲಿ ಅಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಬೇಕೆಂದು ಭಾರತಕ್ಕೆ ತೋರಿಸಿ ಕೊಡುವುದಾಗಿ ಇತ್ತೀಚೆಗೆ ಹೇಳಿಕೆ ನೀಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ರನ್ನು ಭಾರತದ ಮಾಜಿ ಕ್ರಿಕೆಟಿಗ ಮುಹಮ್ಮದ್ ಕೈಫ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ ಎಂಬ ಪ್ರಶ್ನೆಯನ್ನೂ ಅವರು ಇಮ್ರಾನ್ ಖಾನ್ ಅವರಲ್ಲಿ ಕೇಳಿದ್ದಾರೆ. ಅಲ್ಪಸಂಖ್ಯಾತರನ್ನು ಚೆನ್ನಾಗಿ ನೋಡಿಕೊಳ್ಳುವ ಬಗ್ಗೆ ಉಪದೇಶ ನೀಡುವ ಕೊನೆಯ ದೇಶ ಪಾಕಿಸ್ತಾನವಾಗಬೇಕು ಎಂದೂ ಕೈಫ್ ಹೇಳಿದ್ದಾರೆ.

“ದೇಶ ವಿಭಜನೆಯಾದಾಗ ಪಾಕಿಸ್ತಾನದಲ್ಲಿ ಶೇ 20ರಷ್ಟು ಅಲ್ಪಸಂಖ್ಯಾತರಿದ್ದರು. ಅವರಲ್ಲಿ ಶೇ 2ಕ್ಕಿಂತಲೂ ಕಡಿಮೆ ಮಂದಿ ಈಗ ಇದ್ದಾರೆ.  ಆದರೆ ಭಾರತದ ಅಲ್ಪಸಂಖ್ಯಾತ ಜನಸಂಖ್ಯೆ ಸ್ವಾತಂತ್ರ್ಯ ದೊರೆತಂದಿನಿಂದ ಬಹಳಷ್ಟು ಹೆಚ್ಚಾಗಿದೆ'' ಎಂದು ಕೈಫ್ ಟ್ವೀಟ್ ಮಾಡಿದ್ದಾರೆ.

ಬಾಲಿವುಡ್ ನಟ ನಾಸಿರುದ್ದೀನ್ ಶಾ ಇತ್ತೀಚೆಗೆ ಬುಲಂದ್ ‍ಶಹರ್ ಹಿಂಸಾಚಾರದ ಹಿನ್ನೆಲೆಯಲ್ಲಿ ನೀಡಿದ ಭಾರೀ ಪ್ರತಿರೋಧ ವ್ಯಕ್ತವಾದ ನಂತರ ಇಮ್ರಾನ್ ಖಾನ್ ಹೇಳಿಕೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News