ಕೆಸಿಎಫ್ ಯುಎಇ ನ್ಯಾಷನಲ್ ಸಮಿತಿ ಪ್ರತಿಭೋತ್ಸವದ ಲಾಂಛನ ಬಿಡುಗಡೆ

Update: 2018-12-25 12:51 GMT

ಯುಎಇ,ಡಿ.25: ಕೆಸಿಎಫ್ ಯುಎಇ ನ್ಯಾಷನಲ್ ಸಮಿತಿ ಆಯೋಜಿಸಿದ ಪ್ರತಿಭೋತ್ಸವ ಯುನಿಕ್ ಲೋಗೋ ಕಂಟೆಸ್ಟ್-2019 ಸ್ಪರ್ಧೆಯ ಲಾಂಛನವನ್ನು ಕೆಸಿಎಫ್ ರಾಷ್ಟ್ರೀಯ ನಾಯಕರು ಮತ್ತು ಪ್ರತಿಭೋತ್ಸವ ಸ್ವಾಗತ ಸಮಿತಿ ನಾಯಕರ ಸಹಭಾಗಿತ್ವದಲ್ಲಿ ಯುಎಇ ಎಕ್ಸ್ ಚೇಂಜ್ ಮಾಲಕ NMC ಸಮೂಹ ಸಂಸ್ಥೆಗಳ ಸಂಸ್ಥಾಪಕ ಬಿ.ಆರ್ ಶೆಟ್ಟಿಯವರು ಅಧಿಕೃತವಾಗಿ ಬಿಡುಗಡೆಗೊಳಿಸಿದರು

ರಾಜ್ಯದಿಂದ ಹಲವಾರು ವಿನ್ಯಾಸಗಾರರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಲೋಗೋ ವಿನ್ಯಾಸವನ್ನು ಕಳುಹಿಸಿಕೊಟ್ಟಿದ್ದರು. 50ಕ್ಕೂ ಮಿಕ್ಕ ವಿನ್ಯಾಸವನ್ನು ಪರಿಶೀಲಿಸಿದ ಕೆಸಿಎಫ್ ರಾಷ್ಟ್ರೀಯ ನಾಯಕರು ಅಶ್ರಫ್ ಕುಕ್ಕಾಜೆಯವರು ರಚಿಸಿದ ಲೋಗೋವನ್ನು ಅಧಿಕೃತವಾಗಿ ಆಯ್ಕೆ ಮಾಡಿದ್ದಾರೆ.

ಪ್ರಸ್ತುತ ಲೋಗೋವಿನ ತಳಭಾಗ ಮರಳು ಗಾಡಿನಿಂದ ಆವೃತ್ತಗೊಂಡಿದ್ದು, ಪ್ರವಾಸೀ ಜೀವನದ ಆರಂಭವನ್ನು ತಿಳಿಸುತ್ತದೆ. ಕರ್ಜೂರದ ಮರವೊಂದು 'K' ಆಕಾರದಲ್ಲಿ ಭಾಗಿ ನಿಂತಿದ್ದು ಅರಬ್ ರಾಷ್ಟ್ರದ ಮರಳುಗಾಡಿನ ಪ್ರಶಾಂತ ವಾತಾವರಣದಲ್ಲಿ ಬೆಳೆದು ಬರುತ್ತಿರುವ ಕರ್ಜೂರದ ಮರದ ಹಾಗೆ ಪ್ರವಾಸಿ ಜೀವನವು ಆರಂಭಗೊಳ್ಳುತ್ತದೆ. ಚಂದ್ರನ ಆಕಾರದಲ್ಲಿ 'C' ಮೂಡಿ ಬಂದಿದ್ದು ಪ್ರವಾಸಿ ಜೀವನದ ಬೆಳಕಾಗಿ ಕೆಸಿಎಫ್ ಕಾರ್ಯನಿರ್ವಹಿಸುತ್ತಿದೆ ಎಂದು ಸೂಚಿಸುತ್ತದೆ. ಗಿಡ ಮತ್ತು ಎಲೆಗಳ ರೂಪದಲ್ಲಿ 'F' ಮೂಡಿ ಬಂದಿದ್ದು, ಇದರ ಮಧ್ಯೆ ಪೆನ್ಸಿಲ್ ಆಕಾರದಲ್ಲಿ ಒಂದು ಎಲೆಯು ಪ್ರತಿಭೆಗಳನ್ನು ಹೋಲುವ ರೀತಿಯಲ್ಲಿದೆ. ಇದರ ಮೇಲ್ತುದಿಯಲ್ಲಿ ಬಣ್ಣ ಬಣ್ಣದ ಬಿಂದುಗಳು ಸೌಂದರ್ಯವನ್ನು ನೀಡಿದ್ದು, ಕೆಸಿಎಫ್ ಮೂಲಕ ವಿವಿಧ ರೀತಿಯ ಪ್ರಯೋಜನಗಳನ್ನು ಪಡೆದು ಸುಂದರವಾದ ಪ್ರವಾಸಿ ಜೀವನವನ್ನು ಆಸ್ವಾದಿಸಬಹುದು ಎಂಬ ಸ್ಪಷ್ಟ ಸಂದೇಶವನ್ನು ಸಾರುತ್ತದೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News