ಸೌರವ್ ಗಂಗುಲಿ ದಾಖಲೆ ಮುರಿದ ಚೇತೇಶ್ವರ ಪೂಜಾರ

Update: 2018-12-27 05:37 GMT

ಮೆಲ್ಬೋರ್ನ್, ಡಿ.27: ಆಸ್ಟ್ರೇಲಿಯ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ವೃತ್ತಿಜೀವನದ 17ನೇ ಶತಕ ಪೂರೈಸಿದ ಭಾರತದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಈ ಮೂಲಕ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಅವರ ಗರಿಷ್ಠ ಶತಕಗಳ ದಾಖಲೆಯನ್ನು ಮುರಿದರು. ಗಂಗುಲಿ ವೃತ್ತಿಜೀವನದಲ್ಲಿ ಒಟ್ಟು 16 ಟೆಸ್ಟ್ ಶತಕಗಳನ್ನು ಸಿಡಿಸಿದ್ದರು.

ಪೂಜಾರ 3ನೇ ಟೆಸ್ಟ್‌ನ 2ನೇ ದಿನವಾದ ಗುರುವಾರ ಆಸ್ಟ್ರೇಲಿಯದ ಸ್ಪಿನ್ನರ್ ನಥಾನ್ ಲಿಯೊನ್ ಎಸೆತವನ್ನು ಬೌಂಡರಿಗೆರೆ ದಾಟಿಸಿ 280 ಎಸೆತಗಳಲ್ಲಿ 17ನೇ ಶತಕ ಪೂರ್ಣಗೊಳಿಸಿದರು. 319 ಎಸೆತಗಳಲ್ಲಿ 106 ರನ್ ಗಳಿಸಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಸೌರಾಷ್ಟ್ರದ ದಾಂಡಿಗ 17ನೇ ಶತಕ ಪೂರೈಸುವುದರೊಂದಿಗೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್(17 ಟೆಸ್ಟ್ ಶತಕ)ದಾಖಲೆಯನ್ನು ಸರಿಗಟ್ಟಿದರು. ಲಕ್ಷ್ಮಣ್ 17 ಶತಕ ಗಳಿಸಲು 225 ಇನಿಂಗ್ಸ್ ಆಡಿದ್ದರೆ, ಪೂಜಾರ 112 ಟೆಸ್ಟ್ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಗಂಗುಲಿ 188 ಟೆಸ್ಟ್ ಇನಿಂಗ್ಸ್‌ಗಳಲ್ಲಿ 16 ಶತಕ ಗಳಿಸಿದ್ದಾರೆ.

ಪೂಜಾರ ಎಂಸಿಜಿಯಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಶತಕ ಗಳಿಸಿದ ಭಾರತ 5ನೇ ದಾಂಡಿಗ ಎನಿಸಿಕೊಂಡರು. ಸಚಿನ್ ತೆಂಡುಲ್ಕರ್(1999ರಲ್ಲಿ, 116 ರನ್), ವೀರೇಂದ್ರ ಸೆಹ್ವಾಗ್(2003ರಲ್ಲಿ 195), ವಿರಾಟ್ ಕೊಹ್ಲಿ(2014ರಲ್ಲಿ 169), ಅಜಿಂಕ್ಯ ರಹಾನೆ(2014ರಲ್ಲಿ 147)ಎಂಸಿಜಿಯಲ್ಲಿ ಶತಕ ಪೂರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News